ಹೊಸದಿಗಂತ ಡಿಜಿಟಲ್ ಡೆಸ್ಕ್:
ದೌರ್ಜನ್ಯ, ವಂಚನೆ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಿ ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಇಂತಹ ಗುಂಡಾಗಳ ರಕ್ಷಣೆಗೆ ರಾಜ್ಯ ಸರ್ಕಾರ ನಿಂತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದರು
ಬೆಂಗಳೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸುಧಾಕರ್ ವಿರುದ್ಧ ಸಾಕಷ್ಟು ಆರೋಪಗಳಿದ್ದರೂ ಕಾಂಗ್ರೆಸ್ ಸರಕಾರ ಅವರಿಗೆ ಕ್ಲೀನ್ ಚಿಟ್ ಕೊಟ್ಟಿದೆ. ನಾವು ನೋಡುತ್ತೇವೆ, ಎಲ್ಲಿವರೆಗೂ ಈ ಆಟವೆಲ್ಲಾ ಅಂತ. ಈಗಾಗಲೇ ಸಿಎಂ, ಗೃಹ ಸಚಿವ, ಮತ್ತು ಡಿಸಿಎಂ ಅವರನ್ನು ರಕ್ಷಿಸುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಯೊಬ್ಬ ಸಮಸ್ಯೆ ಸೃಷ್ಟಿಸಿದಾಗ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳುತ್ತಾರೆ. ಆದರೆ ಸಚಿವರೇ ಇಲ್ಲಿ ಜನರ ಮುಂದೆ ರೌಡಿಯಂತೆ ವರ್ತಿಸಿದರೆ ಅಂತವನ್ನು ರಕ್ಷಿಸಲು ಮುಂದಾಗಿದ್ದಾರೆ. ಇದೆಲ್ಲ ನೋಡುತ್ತಿದ್ದರೆ ಸರ್ಕಾರ ರೌಡಿಗಳು ಮತ್ತು ಗುಂಡಾಗಳ ರಕ್ಷಣೆಗೆ ಮಾತ್ರ ಇರುವಂತೆ ಕಾಣುತ್ತಿದೆ ಎಂದರು.