ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದ ಸುದ್ದಿ ಕೇಳಿ ವಿಶ್ವಾದ್ಯಂತ ಜನರು ಸಂತಾಪ ಸೂಚಿಸುತ್ತಿದ್ದಾರೆ. ಇದಕ್ಕೆ ಸೆಲೆಬ್ರೆಟಿಗಳು ಕೂಡ ಹೊರತಲ್ಲ. ಈ ಭೀಕರ ದುರಂತದ ಬಗ್ಗೆ ಸಿನಿಮಾ ತಾರೆಯರಲ್ಲಿ ರಶ್ಮಿಕಾ ಮಂದಣ್ಣ, ರಮ್ಯಾ, ಸಮಂತಾ ರುತ್ ಪ್ರಭು ಸೇರಿದಂತೆ ಇನ್ನೂ ಅನೇಕರು ತಮ್ಮ ದುಃಖದ ನುಡಿಗಳನ್ನ ಸೋಷಿಯಲ್ ಮೀಡಿಯಾ ಮೂಲಕವೇ ತಿಳಿಸಿದ್ದಾರೆ.
ನನ್ನ ಹೃದಯ ಮಿಡಿಯುತ್ತಿದೆ:
ನಾನು ಸಹ ಪ್ರತಿದಿನವೂ ವಿಮಾನ ಪ್ರಯಾಣ ಮಾಡುತ್ತೇನೆ. ಆದರೆ ಈ ಸುದ್ದಿ ಕೇಳಿದಾಗ ಶಾಕ್ ಆಯಿತು. . ದುರಂತದಲ್ಲಿ ಸತ್ತ ಎಲ್ಲ ಪ್ರಯಾಣಿಕರು ಹಾಗೂ ಅವರ ಕುಟುಂಬಗಳಿಗಾಗಿ ನನ್ನ ಹೃದಯ ಮಿಡಿಯುತ್ತಿದೆ,” ಎಂದು ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಬರೆದುಕೊಂಡಿದ್ದಾರೆ.
ನಟಿ ರಮ್ಯಾ ಪ್ರಾರ್ಥನೆ:
ಅಹಮದಾಬಾದ್ ವಿಮಾನ ದುರಂತದ ಸುದ್ದಿ ಕೇಳಿ ತೀವ್ರ ನೋವಾಗಿದೆ ಮೃತರ ಕುಟುಂಬಗಳಿಗೆ ನನ್ನ ಪ್ರಾರ್ಥನೆಗಳಿರಲಿ, ಎಂದು ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಬೇಸರ ಹಂಚಿಕೊಂಡಿದ್ದಾರೆ.
ಸಮಂತಾ ರುತ್ ಪ್ರಭು ಭಾವುಕ ಪ್ರತಿಕ್ರಿಯೆ:
ಸಮಂತಾ ರುತ್ ಪ್ರಭು ಈ ದುರಂತವನ್ನು ಎಂದಿಗೂ ಮರೆತಕ್ಕದ್ದಲ್ಲ ಎಂದು ಹೇಳಿದ್ದಾರೆ. “ಇಂತಹ ಘಟನೆಗಳಿಂದ ನೂರಾರು ಕನಸುಗಳು ಹಾಗೂ ನಿರೀಕ್ಷೆಗಳು ನಶಿಸಿಹೋಗಿವೆ. ಉಳಿಯುವುದು ಕೇವಲ ನೋವು ಮತ್ತು ದುಃಖ ಮಾತ್ರ. ಮೃತರ ಕುಟುಂಬಗಳಿಗೆ ದೇವರು ಶಕ್ತಿಯನ್ನು ನೀಡಲಿ” ಎಂದು ಅವರು ಬರೆದುಕೊಂಡಿದ್ದಾರೆ.
ಅಲ್ಲು ಅರ್ಜುನ್ ಶೋಕ:
ವಿಮಾನ ದುರಂತದ ಸುದ್ದಿ ಕೇಳಿ ನಟ ಅಲ್ಲು ಅರ್ಜುನ್ ಸಂತಾಪ ಸೂಚಿಸಿದ್ದಾರೆ. “ಇದು ನಿಜಕ್ಕೂ ಹೃದಯ ವಿದ್ರಾವಕವೇ ಆಗಿದೆ. ಮೃತರ ಕುಟುಂಬಕ್ಕೆ ನನ್ನ ಸಂತಾಪ ಸೂಚಿಸುತ್ತೇನೆ. ಎಲ್ಲ ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಎಂದು ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ, ಎಲ್ಲ ಭಾಷೆಗಳ ಸಿನಿಮಾರಂಗದ ಕಲಾವಿದರು ಈ ದುರಂತದ ಬಗ್ಗೆ ತಮ್ಮ ಹೃದಯದ ಭಾವನೆಗಳನ್ನು ಹೊರಹಾಕಿದ್ದಾರೆ. ಈ ಘಟನೆ ಜನರ ಮನಸ್ಸಿನಲ್ಲಿ ನೋವಿನ ಎಳೆಯಾಗಿ ಉಳಿಯುವುದು ಖಂಡಿತ.