ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದು, ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ಆರೋಪವನ್ನು ಖಡಾಖಂಡಿತವಾಗಿ ತಿರಸ್ಕಾರ ಮಾಡುತ್ತೇನೆ ಎಂದು ಅಸಹಜ ಲೈಂಗಿಕ ದೌರ್ಜನ್ಯ ಆರೋಪಗಳ ಬಗ್ಗೆ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
ಹೊಳೆನರಸೀಪುರ ತಾಲೂಕಿನ ಗನ್ನಿಕಡ ಫಾರ್ಮ್ ಹೌಸ್ನಲ್ಲಿ ಮೊದಲ ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಕಾನೂನು ವ್ಯವಸ್ಥೆಯಲ್ಲಿ ಏನು ತೀರ್ಮಾನ ಆಗಬೇಕು ಆಗುತ್ತೆ, ಅವನ ಮೇಲೆಯೂ ಎಫ್ಐಆರ್ ಆಗಿದೆ. ಕಾನೂನಿನಲ್ಲಿ ತನಿಖೆ ಆಗಲಿ, ಸತ್ಯಾಸತ್ಯತೆ ಹೊರಗೆ ಬರಲಿ. ಸತ್ಯ ಏನಿದೆ ಅದು ಹೊರಗೆ ಬಂದೇ ಬರುತ್ತದೆ. ನಾಡಿನ ಕಾನೂನಿನ ಮೇಲೆ ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಇದು ಸಂಪೂರ್ಣ ರಾಜಕೀಯ ಷಡ್ಯಂತ್ರ. ಅದರ ಬಗ್ಗೆ ನಾನು ಇವತ್ತು ಏನು ಪ್ರತಿಕ್ರಿಯೆ ಕೊಡಲ್ಲ. ಇಂತಹವರು, ಅಂತಹವರು, ಅವರು, ಇವರು ಮಾಡಿದರು ಎಂದು ನಾನು ಚರ್ಚೆ ಮಾಡಲು ಹೋಗಲ್ಲ, ತನಿಖೆ ಪ್ರಗತಿಯಲ್ಲಿದೆ, ಸತ್ಯಾಸತ್ಯತೆ ಹೊರಗೆ ಬರುತ್ತೆ. ಇಡೀ ರಾಜ್ಯದ ಜನತೆ ಅದನ್ನು ನೋಡುತ್ತಾರೆ ಎಂದು ಡಾ. ಸೂರಜ್ ರೇವಣ್ಣ ಹೇಳಿದ್ದಾರೆ.