ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲೆಡೆ ಗಂಡು ಮಗು ಬೇಕು ಎಂದು ಎರಡು ಮೂರು ಹೆಣ್ಣುಮಕ್ಕಳಾದರು ಇನ್ನೊಂದು ಮಗು ಮಾಡಿಕೊಳ್ಳೋಣ ಎಂದು ಹೇಳುವ ಪೋಷಕರಿದ್ದಾರೆ. ಆದರೆ ಇದೊಂದು ಉಲ್ಟಾ ಕಥೆ.
ಹೆಣ್ಣು ಮಗುವಿಗಾಗಿ ಹವಣಿಸುತ್ತಿದ್ದ ಯಲಾನ್ಸಿಯಾ ರೊಸಾರಿಯೊಗೆ 9 ಗಂಡುಮಕ್ಕಳಿದ್ದಾರೆ. ಒಂಬತ್ತು ಗಂಡು ಮಕ್ಕಳಿದ್ದರೂ ಆಕೆಗೆ ಹೆಣ್ಣು ಮಗು ಬೇಕು ಎನ್ನುವ ಆಸೆ ಇತ್ತು.
ಹತ್ತನೇ ಬಾರಿ ಗರ್ಭಿಣಿಯಾದಾಗ ಆಕೆ ಟ್ವಿನ್ಸ್‌ಗೆ ಜನ್ಮ ನೀಡಿದ್ದಾಳೆ. ಆಕೆಯ ಅದೃಷ್ಟಕ್ಕೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಆಗಿದೆ. ತನಗೆ ಈ ಬಾರಿಯೂ ಹೆಣ್ಣು ಮಗು ಆಗದೇ ಹೋಗಿದ್ದರೆ 11ನೇ ಬಾರಿಗೆ ಗರ್ಭಿಣಿಯಾಗಲು ಸಿದ್ಧ ಎಂದು ಯಲಾನ್ಸಿಯಾ ಹೇಳಿಕೊಂಡಿದ್ದಾರೆ.