ನಿಮ್ಮ ನಿದ್ದೆ ಟೈಮಿಂಗ್ಸ್ ಇಲ್ಲದೇ ಇರಬಹುದು, ನಿದ್ದೆ ಬಂದಾಗ ಮಲಗ್ತೀವಿ ಅನ್ಬೋದು, ಕೆಲವರಿಗೆ ಕೆಲಸ ಮುಗಿಯೋದೇ ತಡವಾಗ್ಬೋದು ಅಂತವರಿಗೆ ಹೇಳೋದು ಕಷ್ಟ. ಬಟ್ ಫ್ರೀಯಾಗಿ ಮನೆಗೆ ಬಂದು ಒಂಬತ್ತು ಗಂಟೆಗೆ ಮಲಗೋಕೆ ಚಾನ್ಸ್ ಇದ್ದರೂ, ಮಾತುಕತೆಯಲ್ಲಿ, ಪಾರ್ಟಿಯಲ್ಲಿ ಅಥವಾ ಮೊಬೈಲ್ ನೋಡ್ತಾ ಟೈಮ್ ಪಾಸ್ ಮಾಡೋರು ಇದನ್ನು ಓದಿ..
ಒಂದು ವಾರ ಮಿಸ್ ಮಾಡದಂತೆ ನಿಮ್ಮ ಫೋನನ್ನು ರೂಮಿನ ಹೊರಗಿಟ್ಟು ಬೆಡ್ ಟೈಮ್‌ಗಿಂತ ಒಂದು ಗಂಟೆ ಮುಂಚಿತವಾಗಿ ರೂಮಿಗೆ ಹೋಗಿ ಬಾಗಿಲು ಹಾಕಿ. ಗೋಡೆ ನೋಡಿ, ಬುಕ್ ಓದಿ, ಯೋಚನೆ ಮಾಡಿ ಏನೋ ಮಾಡಿ, ನಿದ್ದೆ ಬರೋದು ಗ್ಯಾರೆಂಟಿ.
ಇದೇ ಅಭ್ಯಾಸ ಆಗಿ ಹತ್ತರೊಳಗೆ ಮಲಗಿದ್ರೆ ಏನೆಲ್ಲಾ ಲಾಭ ಗೊತ್ತಾ?
ಮಾನಸಿಕ ಆರೋಗ್ಯ ಚೆನ್ನಾಗಿರತ್ತೆ. ಸ್ಟ್ರೆಸ್ ಆಂಕ್ಸೈಟಿ ಓಡಿಹೋಗತ್ತೆ
ನಿಮ್ಮ ಮೆಮೋರಿ, ಕಾನ್ಸಂಟ್ರೇಷನ್, ಸಮಸ್ಯೆ ಬಿಡಿಸುವ ಸ್ಕಿಲ್ ಹೆಚ್ಚಾಗತ್ತೆ.
ನಿಮ್ಮ ಇಮ್ಯುನಿಟಿ ಹೆಚ್ಚಾಗಿ, ರೋಗಗಳು ಸುಳಿಯೋದಿಲ್ಲ.
ಆರೋಗ್ಯಕರ ತೂಕ ನಿಮ್ಮದಾಗುತ್ತದೆ.
ಬೆಳಗ್ಗೆ ಎದ್ದಾಗ ಒಳ್ಳೆಯ ಎನರ್ಜಿ ಲೆವೆಲ್ ಇರುತ್ತದೆ. ಹೃದಯ ಸಂಬಂಧಿ ಕಾಯಿಲೆ ಬರೋದಿಲ್ಲ.
ಉತ್ತಮ ಸ್ಕಿನ್ ಹಾಗೂ ಬ್ಯಾಲೆನ್ಸ್ಡ್ ಹಾರ್ಮೋನ್ಸ್ ಇರುತ್ತದೆ. ಲೈಫ್‌ಸ್ಪಾನ್ ಕೂಡ ಹೆಚ್ಚಾಗುತ್ತದೆ.