ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇನ್ನು ಮುಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರರವಾಗಿ ಬದಲಾಗಿದೆ. ಇಂದಿನಿಂದಲೇ ಈ ಹೆಸರು ಜಾರಿಯಾಗಿದೆ.
ಇತ್ತ ಈ ವಿಚಾರವಾಗಿ ವಿಪಕ್ಷ ನಾಯಕ ಆರ್ ಅಶೋಕ್, ಇದು ಗ್ರೇಟರ್ ಬೆಂಗಳೂರು ಅಲ್ಲ, ಕ್ವಾರ್ಟರ್ ಬೆಂಗಳೂರು ಎಂದು ಟೀಕಿಸಿದ್ದಾರೆ.
ತುಘಲಕ್ ದರ್ಬಾರ್ ಅನ್ನೋದು ಇದನ್ನೇ. ಕೆಂಪೇಗೌಡರು ನಾಲ್ಕು ಗೋಪುರ ಕಟ್ಟಿ ಒಂದು ಬೆಂಗಳೂರು ಮಾಡಿದರು. ಕಾಂಗ್ರೆಸಿಗರು ಬೆಂಗಳೂರಿನ ಒಂದು ಬಾಗಿಲು ಮೂರು ಮಾಡಿದ್ದಾರೆ. ಯಾರದ್ದೋ ಆಸ್ತಿಗೆ ಬೆಲೆ ಬರಬೇಕು ಎಂದು ಮಾಡುವುದಲ್ಲ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು ಒಡೆದರೆ ಕೆಂಪೇಗೌಡರಿಗೆ ದ್ರೋಹ ಬಗೆದಂತೆ. ಬೆಂಗಳೂರು ಮೂರು ಭಾಗ ಆದರೆ ಆದಾಯ ಏನು ಬರುತ್ತದೆ? ಎಂದು ಪ್ರಶ್ನಿಸಿದರು.