ಉಡುಪಿ ವಿಡಿಯೋ ವಿವಾದ | ಇದು ಮಕ್ಕಳಾಟ ಅನ್ನೋ ಅರ್ಥದ ಹೇಳಿಕೆ ನನ್ನದಲ್ಲ: ಗೃಹ ಸಚಿವರ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಕ್ಕಳಾಟ ಎಂದು ಎಲ್ಲಿಯೂ ಹೇಳಿಲ್ಲ, ಸುಮ್ಮನೆ ಪ್ರಕರಣವನ್ನು ರಾಜಕೀಯವಾಗಿ ಬಳಸಲಾಗುತ್ತಿದೆ ಎಂದು ಗೃಹ ಸಚಿವ ಡಾ ಜಿ. ಪರಮೇಶ್ವರ ಹೇಳಿದ್ದಾರೆ.

ಘಟನೆ ಬಗ್ಗೆ ಹಗುರವಾಗಿ ಮಾತನಾಡಿಲ್ಲ, ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಆದರೂ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಇಂದು ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಸ್ನೇಹಿತರ ಮಧ್ಯೆ ಈ ರೀತಿ ನಡೆಯಬಹುದು, ಅದನ್ನು ಅಲ್ಲಿಗೇ ಬಿಟ್ಟುಬಿಡಬೇಕು ಎಂದು ಹೇಳಿದ್ದು ನಿಜ, ಆದರೆ ಅದನ್ನು ಪ್ರಾಂಶುಪಾರಲಿಗೆ ಬಿಟ್ಟುಬಿಡಿ ಅವರು ಈ ವಿಷಯವನ್ನು ಡೀಲ್ ಮಾಡುತ್ತಾರೆ ಎನ್ನುವ ಅರ್ಥ ನನ್ನ ಮಾತಿನದ್ದು. ಆದರೆ ನನ್ನ ಹೇಳಿಕೆಯನ್ನೇ ತಿರುಚಿ ಹೇಳಲಾಗುತ್ತಿದೆ.

ನಾವು ಹಾಸ್ಟೆಲ್‌ನಲ್ಲಿ ಓದಿದವರೇ ಈ ರೀತಿ ಏನಾದ್ರೂ ತಮಾಷೆಗೆ ಮಾಡಿ ಅಲ್ಲಿಗೆ ಸರಿಯಾಗುತ್ತಿತ್ತು. ದೊಡ್ಡ ಮಟ್ಟಕ್ಕೆ ಹೋಗುತ್ತಿರಲಿಲ್ಲ. ನಾನು ಈ ಅರ್ಥದಲ್ಲಿ ಮಾತನಾಡಿದ್ದು, ಮಕ್ಕಳಾಟ ಇದು ಗಂಭೀರ ವಿಷಯ ಅಲ್ಲ ಎಂದು ಎಲ್ಲಿಯೂ ಹೇಳಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!