ತೆಲಂಗಾಣದ ಜನರಿಗೆ ಇದು ನಮ್ಮ ಗ್ಯಾರಂಟಿ: ಮಹಿಳೆಯರಿಗೆ 2,500 ಸಹಿತ 6 ಯೋಜನೆ ಘೋಷಿಸಿದ ಕಾಂಗ್ರೆಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣದಲ್ಲಿ ಗೆಲುವಿನ ಲೆಕ್ಕಾಚಾರಕ್ಕೆ ಕಾಂಗ್ರೆಸ್ ಇಳಿದಿದ್ದು, ಬರಪೂರ ಯೋಜನೆಗಳನ್ನು ಘೋಷಿಸಿದೆ.

ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮಹಿಳೆಯರಿಗೆ ಮಾಸಿಕ ರೂ. 2,500 ಆರ್ಥಿಕ ನೆರವು ಸೇರಿದಂತೆ 6 ಗ್ಯಾರಂಟಿಗಳನ್ನು ಘೋಷಿಸಿದರು.

ತೆಲಂಗಾಣದ ಮಹಿಳೆಯರಿಗೆ ಮಹಾಲಕ್ಷ್ಮಿ ಯೋಜನೆಯಡಿ ಮಾಸಿಕ ₹2,500 ಆರ್ಥಿಕ ನೆರವು, ₹500ಕ್ಕೆ ಗ್ಯಾಸ್ ಸಿಲಿಂಡರ್, ರಾಜ್ಯಾದ್ಯಂತ ಟಿಎಸ್ಆರ್ಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ತೆಲಂಗಾಣ ಜನತೆಯ ಆಶೋತ್ತರಗಳನ್ನು ಈಡೇರಿಸಲು ನಾವು 6 ಭರವಸೆಗಳನ್ನು ಘೋಷಿಸುತ್ತಿದ್ದೇವೆ, ಅವುಗಳಲ್ಲಿ ಪ್ರತಿಯೊಂದನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.

ಹೈದರಾಬಾದ್ ಸಮೀಪದ ತುಕ್ಕುಗುಡದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಕಾಣುವುದು ನನ್ನ ಕನಸು, ಸಮಾಜದ ಎಲ್ಲಾ ವರ್ಗಗಳ ಪರ ಕೆಲಸ ಮಾಡಲಿದ್ದು, ಕಾಂಗ್ರೆಸ್ ಬೆಂಬಲಿಸುವಂತೆ ಜನತೆಯಲ್ಲಿ ಅವರು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!