ಸಾಮಾಗ್ರಿಗಳು
ಅಕ್ಕಿ- 1 ಕೆಜಿ
ಗೋಧಿ- ಅರ್ಧ ಕೆ.ಜಿ
ಮೆಂತ್ಯೆ- ಕಾಲು ಕೆ.ಜಿ
ಉದ್ದಿನ ಕಾಳು-ಕಾಲು ಕೆ.ಜಿ
ಮಾಡುವ ವಿಧಾನ
ಅಕ್ಕಿ, ಗೋಧಿ, ಮೆಂತ್ಯೆ ಹಾಗೂ ಉದ್ದಿನ ಕಾಳನ್ನು ಎಲ್ಲವನ್ನು ಒಂದೊಂದಾಗಿ ತೆಗೆದುಕೊಂಡು ಸಣ್ಣ ಉರಿಯಲ್ಲಿ ಕೆಂಪಗೆ ಆಗುವವರೆಗೆ ಹುರಿಯಬೇಕು. ಇದು ತಣಿದ ಮೇಲೆ ನುಣ್ಣಗೆ ಹಿಟ್ಟು ಮಾಡಿಕೊಳ್ಳಬೇಕು ಅಥವಾ ಮಿಲ್‌ನಲ್ಲೂ ಹಿಟ್ಟು ಮಾಡಿಕೊಳ್ಳಬಹುದು. ರಾಗಿ ಮುದ್ದೆ ಮಾದರಿಯಲ್ಲೇ ಮೆಂತ್ಯೆ ಮುದ್ದೆ ಮಾಡಬೇಕು.
2 ಮುದ್ದೆ ಮಾಡಲು ದೊಡ್ಡ ಲೋಟದಲ್ಲಿ ಒಂದು ಕಾಲು ಲೋಟ ನೀರಿಗೆ ಅರ್ಧ ಚಮಚ ಹಿಟ್ಟನ್ನು ನೀರಿಗೆ ಕಲಿಸಿ ಕುದಿಯಲು ಇಡಬೇಕು. ಇದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ ಅಥವಾ ಉಪ್ಪು ಬೆರೆಸಿಕೊಳ್ಳಿ.
ನೀರು ಕುದಿ ಬಂದ ಮೇಲೆ ಒಂದು ಚಮಚ ತುಪ್ಪ ಬೆರೆಸಿ, ನಂತರ ನೀರಿನ ಅಳತೆಯ ಲೋಟದಲ್ಲೇ ಮುಕ್ಕಾಲು ಲೋಟ ಹಿಟ್ಟನ್ನು ನೀರಿಗೆ ಬೆರೆಸಿ ಕುದಿಯಲು ಬಿಡಬೇಕು. ಸ್ವಲ್ಪ ಸ್ವಲ್ಪ ಮೆಲ್ಲಗೆ ಹಿಟ್ಟನ್ನು ನೀರಿನಲ್ಲಿ ಮಿಕ್ಸ್ ಮಾಡುತ್ತಿರಬೇಕು. ಇದು ಮುದ್ದೆ ಹದ ಬಂದ ಮೇಲೆ ಉಂಡೆ ಕಟ್ಟಿ, ಸಕ್ಕರೆ ತುಪ್ಪದ ಜೊತೆ ಸೇವಿಸಬಹುದು. ಇಲ್ಲವಾದರೆ ನೀರಿಗೆ ಬೆಲ್ಲ ಹಾಕಿ ಬರೀ ತುಪ್ಪದ ಜೊತೆಯೂ ಸೇವಿಸಬಹುದು.