January 29, 2026
Thursday, January 29, 2026
spot_img

ಇದು ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯ ಲೆಕ್ಕಾಚಾರ: ಈಗ ಚುನಾವಣೆ ನಡೆದರೆ ಎನ್‌ಡಿಎಗೆ 352 ಸ್ಥಾನ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸದ್ಯ ಲೋಕಸಭೆ ಚುನಾವಣೆ ಏನಾದರು ನಡೆದರೆ ಬಿಜೆಪಿ 287 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಇನ್ನು ಎನ್‌ಡಿಎ 352 ಸ್ಥಾನಗಳನ್ನು ಪಡೆಯುತ್ತಿದ್ದವು ಎಂದು ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆ ಹೇಳಿದೆ.

ಇಂಡಿಯಾ ಟುಡೇಯಿಂದ ಪ್ರತಿ ನಾಲ್ಕೈದು ತಿಂಗಳಿಗೊಮ್ಮೆ ಮೂಡ್‌ ಆಫ್‌ ದಿ ನೇಷನ್‌ ಸಮೀಕ್ಷೆ ನಡೆಯುತ್ತದೆ.ಪ್ರಧಾನಿ ಮೋದಿ ಕಾರ್ಯಕ್ಷಮತೆಗೆ ಹಲವರು ಮೆಚ್ಚಿದ್ದು, ಜನ ಬಿಜೆಪಿಗೆ ಹೆಚ್ಚಿನ ಒಲವು ತೋರಿದ್ದಾರೆ.

ಈ ಹಿಂದೆ ನಡೆದ ಆಗಸ್ಟ್ 2025ರ ಸಮೀಕ್ಷೆಗಿಂತ ಬಿಜೆಪಿ 27 ಸ್ಥಾನಗಳ ಹೆಚ್ಚಳವಾಗಿದೆ. ಇನ್ನು ಕಾಂಗ್ರೆಸ್ 80 ಸ್ಥಾನಗಳಿಗೆ ಕುಸಿಯುವ ಸಾಧ್ಯತೆಯಿದೆ, ಇದು ಹಿಂದಿನ ಸಮೀಕ್ಷೆಗಿಂತ 17 ಸ್ಥಾನಗಳ ಇಳಿಕೆಯಾಗಿದೆ. ಇನ್ನುಳಿದ ಪಕ್ಷಗಳು ಒಟ್ಟಾಗಿ 176 ಸ್ಥಾನಗಳನ್ನು ಪಡೆಯಬಹುದು, ಇದು 10 ಸ್ಥಾನಗಳ ಇಳಿಕೆಯಾಗಿದೆ.

ಸದ್ಯ ಚುನಾವಣೆ ನಡೆದರೆ, ಎನ್‌ಡಿಎ ಶೇ 47 ಮತಗಳನ್ನು ಪಡೆಯುವ ನಿರೀಕ್ಷೆಯಿದೆ. ಇಂಡಿಯಾ ಒಕ್ಕೂಟವು ಶೇಕಡಾ 39 ರಷ್ಟು ಮತಗಳನ್ನು ಪಡೆಯುವ ಅಂದಾಜಿದೆ. ಇದು ಹಿಂದಿನ ಸಮೀಕ್ಷೆಗೆ ಹೋಲಿಸಿದರೆ ಇಂಡಿಯಾ ಒಕ್ಕೂಟದ ಮತ ಶೇಕಡಾ 2 ರಷ್ಟು ಕಡಿಮೆಯಾಗಿದೆ. ಇನ್ನುಳಿದ ಪಕ್ಷಗಳು ಒಟ್ಟಾಗಿ ಶೇಕಡಾ 14ರಷ್ಟು ಮತಗಳನ್ನು ಗಳಿಸುವ ನಿರೀಕ್ಷೆಯಿದೆ.

ನರೇಂದ್ರ ಮೋದಿ ಅವರು 2026ರ ಜನವರಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಪ್ರಧಾನಮಂತ್ರಿ ಸ್ಥಾನಕ್ಕೆ ಅತ್ಯುತ್ತಮ ಆಯ್ಕೆ ಎಂದು ಶೇಕಡಾ 55 ರಷ್ಟು ಮತದಾರರು ಅಭಿಪ್ರಾಯಪಟ್ಟಿದ್ದಾರೆ. 2025ರ ಆಗಸ್ಟ್‌ನಲ್ಲಿ ಶೇಕಡಾ 52 ರಷ್ಟು ಇತ್ತು. ಇದರಿಂದ ಬೆಂಬಲಕ್ಕಿಂತ ಹೆಚ್ಚಾಗಿದೆ.

ರಾಹುಲ್ ಗಾಂಧಿ ಅವರ ಬೆಂಬಲವೂ ಶೇ 27 ರಷ್ಟು ತಲುಪಿದೆ. ಹಿಂದಿನ ಸಮೀಕ್ಷೆಯ ಶೇಕಡಾ 25 ರಷ್ಟು ಇತ್ತು. ಈ ಮೂಲಕ ರಾಹುಲ್ ಗಾಂಧಿ ಅವರ ಬೆಂಬಲವೂ ಸ್ಥಿರವಾಗಿ ಹೆಚ್ಚುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ.

2024 ರ ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಎಷ್ಟು ಸ್ಥಾನ?
ಎನ್‌ಡಿಎ – 293
ಇಂಡಿಯಾ – 234
ಇತರೆ – 16

ಏನಿದು ಸಮೀಕ್ಷೆ?
‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯು ದೇಶದ ಜನರ ಮನಸ್ಥಿತಿಯನ್ನು ಅರಿಯುವ ಒಂದು ಅಧ್ಯಯನವಾಗಿದೆ. ಇದು ಚುನಾವಣೆಗೂ ಮುನ್ನ ಜನರ ಅಭಿಪ್ರಾಯಗಳನ್ನು ತಿಳಿಯಲು ಸಹಾಯ ಮಾಡುತ್ತದೆ. ಈ ಸಮೀಕ್ಷೆಯಲ್ಲಿ, ಪ್ರಧಾನಮಂತ್ರಿ ಸ್ಥಾನಕ್ಕೆ ಯಾರು ಸೂಕ್ತರು, ಪ್ರಧಾನಿಯವರ ಕಾರ್ಯಕ್ಷಮತೆ ಹೇಗಿದೆ, ಮತ್ತು ಜನರ ಒಟ್ಟಾರೆ ತೃಪ್ತಿ ಮಟ್ಟ ಎಷ್ಟಿದೆ ಎಂಬುದನ್ನು ತಿಳಿಯಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !