ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಗೃಹ ಸಚಿವಾಲಯದ ಉನ್ನತಾಧಿಕಾರದ ಸಮಿತಿ ದೆಹಲಿಯಲ್ಲಿ ಲಡಾಖ್ ನಾಯಕರೊಂದಿಗೆ ವಿವಿಧ ವಿಷಯಗಳ ಕುರಿತು ಮಾತುಕತೆ ಆರಂಭಿಸಿದೆ.
ಕಳೆದ ತಿಂಗಳು ಕೇಂದ್ರಾಡಳಿತ ಪ್ರದೇಶ ಲಡಾಖ್ ನಲ್ಲಿ ನಡೆದ ಹಿಂಸಾಚಾರ ನಂತರ ಪ್ರಮುಖ ವಿಷಯಗಳ ಕುರಿತು ನಡೆದ ಮೊದಲ ಔಪಚಾರಿಕ ಮಾತುಕತೆ ಇದಾಗಿದೆ.
ಲಡಾಖ್ ಕುರಿತ ಕೇಂದ್ರ ಗೃಹ ಸಚಿವಾಲಯದ ಉನ್ನತಾಧಿಕಾರದ ಸಮಿತಿ ಲೇಹ್ ನ ಉನ್ನತ ಸಂಸ್ಥೆ ಎಬಿಎಲ್ ಹಾಗೂ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ಜತೆಗಿನ ಮಾತುಕತೆಯ ಕಾರ್ಯ ವಿಧಾನವನ್ನು ರೂಪಿಸಿದೆ. ಲಡಾಖ್ ನಿಯೋಗವು ಕೇಂದ್ರಾಡಳಿತ ಪ್ರದೇಶಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ಮುಂದಿಡುವ ಸಾಧ್ಯತೆ ಇದೆ. ಈ ಹಿಂದಿನ ಮಾತುಕತೆ ಸಮಯದಲ್ಲಿ ಉದ್ಯೋಗ ಮೀಸಲಾತಿ ಮತ್ತು ವಸತಿ ಸೌಲಭ್ಯದ ಬೇಡಿಕೆಯನ್ನು ಕೇಂದ್ರ ಸರ್ಕಾರ ಬಗೆಹರಿಸಿತ್ತು.
ಲಡಾಕ್ ಹಿಂಸಾಚಾರ ಬಳಿಕ ಇದೇ ಮೊದಲ ಬಾರಿಗೆ ಗೃಹ ಸಚಿವಾಲಯ ಮಾತುಕತೆ: ಪ್ರತ್ಯೇಕ ರಾಜ್ಯಕ್ಕೆ ಪಟ್ಟು ಹಿಡಿಯುತ್ತಾರಾ ನಾಯಕರು?

