ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದ್ದು, ತಾಯಿ ಜಗನ್ಮಾತೆಯ ಆರಾಧನೆ ಜೋರಾಗಿ ನಡೆಯುತ್ತಿದೆ. ನವ ದುರ್ಗೆಯರ ಪೂಜೆಯ ಜೊತೆ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡಾ ನಡೆಯುತ್ತಿದೆ. ಭಕ್ತರು ಪ್ರತಿನಿತ್ಯ ಶ್ರದ್ಧಾಭಕ್ತಿಯಿಂದ ನವರಾತ್ರಿ ಉತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ.
ಭಾರತದಲ್ಲಿ ಮಾತ್ರವಲ್ಲದೆ ದೂರದ ಅಮೇರಿಕಾದಲ್ಲೂ ಅಲ್ಲಿನ ಭಾರತ ಮೂಲದವರೆಲ್ಲಾ ಸೇರಿ ನವರಾತ್ರಿಯ ಪ್ರಯುಕ್ತ ಅದ್ಧೂರಿ ದುರ್ಗಾ ಪೂಜೆ ಉತ್ಸವವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಹೌದು ಇದೇ ಮೊದಲ ಬಾರಿಗೆ ನ್ಯೂಯಾರ್ಕ್ ಸಿಟಿಯ ಟೈಮ್ ಸ್ಕ್ವೇರ್ ಬಳಿ ನವರಾತ್ರಿ ಉತ್ಸವವನ್ನು ಆಚರಿಸಲಾಗಿದೆ.
ಬಂಗಾಲಿ ಕ್ಲಬ್ ಯುಎಸ್‌ಎ ದುರ್ಗಾ ಪೂಜೆ ಉತ್ಸವವನ್ನು ಆಯೋಜಿಸಿದ್ದು, ಅಕ್ಟೋಬರ್ 5 ಮತ್ತು 6 ರಂದು ನಡೆದ ಈ ಪೂಜಾ ಕಾರ್ಯ, ಸಾಂಸ್ಕೃತಿಕ ಉತ್ಸವದಲ್ಲಿ ಸಾವಿರಾರು ಭಾರತೀಯರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಭಾಗಿಯಾಗಿದ್ದರು. ಈ ಹಬ್ಬದ ಸಂಭ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
History has been Scripted !!!
For the 1st time, Durga puja was organized at the centre of Times Square, New York City, United States. pic.twitter.com/QpTRdVDsxn
— Megh Updates 🚨™ (@MeghUpdates) October 7, 2024