Thursday, October 23, 2025

ಪಿಕೆಎಲ್ ಇತಿಹಾಸದಲ್ಲಿ ಇದೇ ಮೊದಲು! ದಬಾಂಗ್ ದೆಹಲಿಯಿಂದ ಹೊಸ ಜರ್ಸಿ ಅನಾವರಣ

ಹೊಸದಿಗಂತ ವರದಿ ಬೆಂಗಳೂರು:

ಪ್ರೋ ಕಬಡ್ಡಿ ಲೀಗ್ ಸೀಸನ್‌ನಲ್ಲಿ ದಬಾಂಗ್ ದೆಹಲಿ ಕೆ.ಸಿ. (ಡಿಡಿಕೆಸಿ) ತಂಡವು ವಿಶಿಷ್ಟ ಹಸಿರು ಜೆರ್ಸಿಯನ್ನು ಧರಿಸುವ ಮೂಲಕ ಪಿಕೆಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ತಂಡವಾಗಿದೆ. ಕ್ರೀಡಾಂಗಣದ ಕಬಡ್ಡಿ ಕ್ಷಣಗಳನ್ನು ನೈಜ ಪರಿಸರ ಕ್ರಮಗಳೊಂದಿಗೆ ಸಂಪರ್ಕಿಸುವ ಈ ನೂತನ ಪ್ರಯತ್ನ ತಂಡದ ಹಸಿರು ಭವಿಷ್ಯದತ್ತದ ನಿಜವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

‘ರೇಡ್ ಫಾರ್ ಗ್ರೀನ್’ ಅಭಿಯಾನದಡಿಯಲ್ಲಿ ದಬಾಂಗ್ ದೆಹಲಿ ಕೆ.ಸಿ. ಪ್ರತಿ ಯಶಸ್ವಿ ರೇಡ್ ಪಾಯಿಂಟ್‌ನಿಂದ ನೈಜ ಬದಲಾವಣೆಯ ಪರಿಣಾಮ ಉಂಟಾಗುತ್ತದೆ. ಪ್ರತಿ ಯಶಸ್ವಿ ರೇಡ್ ನಂತರ, ಎನ್‌ಸಿಆರ್ ಪ್ರದೇಶದ ಹೆಚ್ಚಿನ ಮಾಲಿನ್ಯ ಮತ್ತು ಕಡಿಮೆ ಹಸಿರು ಆವರಣವಿರುವ ಪ್ರದೇಶಗಳಲ್ಲಿ ಒಂದು ಮರವನ್ನು ನೆಡಲಾಗುತ್ತದೆ. ಈಗಾಗಲೇ ದಬಾಂಗ್ ದೆಹಲಿ ಕೆ.ಸಿ. ತಂಡವು 295 ಮರಗಳನ್ನು ನೆಟ್ಟಿದೆ.

ಈ ಅಭಿಯಾನ ಅಭಿಮಾನಿಗಳನ್ನ ಹಸಿರು ಚಳುವಳಿಯಲ್ಲಿ ಭಾಗವಹಿಸಲು ಪ್ರೇರೇಪಿಸಲು ಉದ್ದೇಶಿಸಿದೆ. “ಗ್ರೀನ್ ಫ್ಯಾನ್ ಆಫ್ ದಿ ಮ್ಯಾಚ್”ವಿಭಾಗದಡಿ ತಮ್ಮ ವೈಯಕ್ತಿಕ ಪರಿಸರ ಸ್ನೇಹಿ ಕ್ರಮಗಳನ್ನು ಹಂಚಿಕೊಳ್ಳುವ ಅಭಿಮಾನಿಗಳನ್ನು ಗೌರವಿಸಲಾಗುತ್ತದೆ. ದೆಹಲಿ ಹಂತದ ಮೊದಲ ಪಂದ್ಯದಲ್ಲಿ ‘ಗ್ರೀನ್ ಗೇಮ್ ಫಾರ್ ದಿ ಕ್ಲೈಮೇಟ್’ ಆಯೋಜಿಸಲಾಗಿತ್ತು, ಇದರಲ್ಲಿ ನೈಜ ಸಮಯದ ಹಸಿರು ಮೆಟ್ರಿಕ್‌ಗಳು ಮತ್ತು ಅಭಿಮಾನಿಗಳ ಪ್ರತಿಜ್ಞೆಗಳು ಪ್ರದರ್ಶಿಸಲಾಯಿತು.

ಈ ಕುರಿತು ಮಾತನಾಡಿದ ದಬಾಂಗ್ ದೆಹಲಿ ಕೆ.ಸಿ. ಸಿಇಒ ಪ್ರಶಾಂತ್ ಮಿಶ್ರ ‘ದಬಾಂಗ್ ದೆಹಲಿ ಕೆ.ಸಿ.ಯಲ್ಲಿ ನಾವು ಕ್ರೀಡೆಯ ಶಕ್ತಿ ಕ್ರೀಡಾಂಗಣದ ಮಿತಿಯನ್ನು ಮೀರಿ ಸಮಾಜದ ಒಳಿತಿಗೆ ಕೂಡ ಬಳಸಬಹುದು ಎಂಬುದನ್ನು ತೋರಿಸಿದ್ದೇವೆ. ಪ್ರತಿ ರೇಡ್, ಪ್ರತಿ ಚೀರಾಟ, ಮತ್ತು ಪ್ರತಿ ಅಭಿಮಾನಿಯ ಕ್ರಮವು ಸ್ವಚ್ಛ ಹಾಗೂ ಹಸಿರು ನಾಳೆಯ ನಿರ್ಮಾಣಕ್ಕೆ ಸಹಕಾರ ನೀಡುತ್ತದೆ. ಈ ಹಸಿರು ಜೆರ್ಸಿ ಕೇವಲ ಬಣ್ಣವಲ್ಲ, ಅದು ಹವಾಮಾನ ಸಕಾರಾತ್ಮಕ ಬದಲಾವಣೆಯತ್ತ ನಮ್ಮ ಬದ್ಧತೆಯ ಪ್ರತೀಕವಾಗಿದೆ ಎಂದರು.

ನಿನ್ನೆ ನಡೆದ ರೋಚಕ ಪಂದ್ಯದಲ್ಲಿ, ದಬಾಂಗ್ ದೆಹಲಿ ಕೆ.ಸಿ. ತಂಡವು ಪುಣೆರಿ ಪಲ್ಟನ್ ವಿರುದ್ಧ ತಮ್ಮ ವಿಶೇಷ ಹಸಿರು ಜೆರ್ಸಿಯಲ್ಲಿ ಮೈದಾನಕ್ಕಿಳಿದು ಹಸಿರು ಭವಿಷ್ಯದತ್ತದ ತಮ್ಮ ಬದ್ಧತೆಯನ್ನು ತೋರಿಸಿತು. ನಾಯಕ ಅಶು ಮಲಿಕ್ ಗೈರುಹಾಜರಿದ್ದರೂ, ದೆಹಲಿ ತಂಡದ ರೇಡರ್‌ಗಳು ಅದ್ಭುತ ತಂಡಭಾವ ಮತ್ತು ನಿಶ್ಚಯತೆಯನ್ನು ಪ್ರದರ್ಶಿಸಿದರು. ಅಜಿಂಕ್ಯ ಪವಾರ್ ಶ್ರೇಷ್ಠ “ಸೂಪರ್ 10” ದಾಖಲಿಸಿ ಮುನ್ನಡೆಸಿದರು.

ದಬಾಂಗ್ ದೆಹಲಿ ಕೆ.ಸಿ. ಭಾರತೀಯ ಕ್ರೀಡಾ ಲೋಕದಲ್ಲಿ ಹೊಸ ಮಾದರಿಯನ್ನು ನಿರ್ಮಿಸಲು ಉದ್ದೇಶಿಸಿದೆ.

error: Content is protected !!