SHOCKING | ವಿಶ್ವದಲ್ಲೇ ಇದೇ ಮೊದಲು, ರೋಬೋಟ್‌ ಆತ್ಮಹತ್ಯೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಾಕಷ್ಟು ವಿಭಿನ್ನವಾದ ನೋವುಗಳಿಂದ ಮನುಷ್ಯರು ಆತ್ಮಹತ್ಯೆಗೆ ಶರಣಾಗುವುದನ್ನು ಕೇಳಿದ್ದೀರಿ, ಆದರೆ ರೋಬೋಟ್‌ ಸೂಸೈಡ್‌ ಬಗ್ಗೆ ಕೇಳಿದ್ದೀರಾ? ವಿಶ್ವದಲ್ಲೇ ಮೊದಲ ಪ್ರಕರಣ ಇದಾಗಿದ್ದು, ಸೌತ್‌ ಕೊರಿಯಾದಲ್ಲಿ ರೋಬೋಟ್‌ ಒಂದು ಆತ್ಮಹತ್ಯೆಗೆ ಶರಣಾಗಿದೆ.

ಪುರಸಭೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೋಬೋಟ್​ ಮೆಟ್ಟಿಲುಗಳ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದೆ ಎಂದು ವರದಿಯಾಗಿದೆ.  ಆತ್ಮಹತ್ಯೆ ಮಾಡಿಕೊಂಡ ಬಳಿಕ ರೋಬೋಟ್​ನ ಭಾಗಗಳನ್ನು ಸಂಗ್ರಹಿಸಲಾಗಿದೆ.

ಆತ್ಮಹತ್ಯೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅಧಿಕಾರಿ. ಮುನ್ಸಿಪಾಲ್ ಕಾರ್ಪೊರೇಷನ್​​ನ ಕೆಲಸದಲ್ಲಿ ರೋಬೋಟ್ ಸಹಾಯ ಮಾಡುತ್ತಿತ್ತು. ಕಳೆದ ಒಂದು ವರ್ಷದಿಂದ ಗುಮಿ ನಗರದ ನಿವಾಸಿಗಳಿಗೆ ಆಡಳಿತಾತ್ಮಕ ಕೆಲಸದಲ್ಲಿ ಬ್ಯುಸಿ ಆಗಿತ್ತು. ಕಳೆದ ವಾರ ಮೆಟ್ಟಿಲುಗಳ ಕೆಳಭಾಗದಲ್ಲಿ ರೋಬೋಟ್ ಪತ್ತೆಯಾಗಿದೆ. ಪ್ರತ್ಯಕ್ಷದರ್ಶಿಗಳು ರೋಬೋಟ್ ಬೀಳುವ ಮೊದಲು ಓಡಾಡುತ್ತಿರೋದನ್ನು ನೋಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಕೆಲಸ ಮಾಡುತ್ತಿತ್ತು. ಯಾಕೆ ಹಾಗೆ ಮಾಡಿಕೊಂಡಿತು ಅನ್ನೋದ್ರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!