ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಸ್ಯಾಂಡಲ್ವುಡ್ ಸೆಲೆಬ್ರಿಟಿ ಕಪಲ್ ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ಒಂದು ತಿಂಗಳ ಹಿಂದಷ್ಟೇ ಪೋಷಕರಾಗಿ ಬಡ್ತಿ ಪಡೆದಿದ್ದಾರೆ.
ತಮ್ಮ ಮದುವೆ ವಾರ್ಷಿಕೋತ್ಸವದ ಸಂದರ್ಭವೇ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಹೌದು, 2025ರ ಜನವರಿ ಕೊನೆಗೆ ನಟಿ ಹರಿಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೊದಲ ಮಗುವನ್ನು ಬರಮಾಡಿಕೊಂಡ ದಂಪತಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತ್ತು.
ಮಹಾ ಶಿವರಾತ್ರಿಯಂದು ತಾರಾ ದಂಪತಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದು ಮನೆಗೆ ಮರಿಸಿಂಹನ ಆಗಮನ ಹೇಗಿತ್ತು? ಎಂಬುದನ್ನು ಒಳಗೊಂಡಿದೆ. ಕೆಲ ದಿನಗಳ ಹಿಂದೆಯೇ ಮನೆಗೆ ಮಗನ ಪ್ರವೇಶ ಆಗಿದ್ದು, ಮಹಾಶಿವರಾತ್ರಿಯ ಶುಭ ದಿನದಂದು ಆಕರ್ಷಕ ವಿಡಿಯೋ ಹಂಚಿಕೊಂಡಿದ್ದಾರೆ. ಸಿಂಹನ ತೋಳಲ್ಲಿ ಮರಿಸಿಂಹನ ದೃಶ್ಯವನ್ನು ನೋಡೋದೇ ಚೆಂದ ಅನ್ನುತ್ತಿದ್ದಾರೆ ಅಭಿಮಾನಿಗಳು.
View this post on Instagram