ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಟೀಂ ಇಂಡಿಯಾದ ಜೆರ್ಸಿ ಮೇಲೆ ಪಾಕಿಸ್ತಾನದ ಹೆಸರಿರಲಿದೆ.
ಹೌದು, ಇದೇ ತಿಂಗಳ 30ರಿಂದ ಏಷ್ಯಾಕಪ್ ಆರಂಭವಾಗಲಿದ್ದು, ಇದರಲ್ಲಿ ಟೀಂ ಇಂಡಿಯಾ ಪಾಕ್ ಹೆಸರಿರುವ ಜೆರ್ಸಿ ತೊಟ್ಟು ಫೀಲ್ಡ್ಗೆ ಇಳಿಯಲಿದೆ.
ಈ ಬಾರಿ ಏಷ್ಯಾಕಪ್ಗೆ ಪಾಕಿಸ್ತಾನ ಆತಿಥ್ಯ ವಹಿಸಿದೆ. ಹೀಗಾಗಿ ಜೆರ್ಸಿ ಏಲೆ ಪಾಕ್ ಹೆಸರನ್ನು ಮುದ್ರಿಸಲಾಗಿದೆ. ಈಗಾಗಲೇ ಜೆರ್ಸಿ ತೊಟ್ಟು ಆಟಗಾರರು ಫೋಟೊಶೂಟ್ ಮಾಡಿಸಿದ್ದು, ಫೋಟೊಸ್ ಎಲ್ಲೆಡೆ ವೈರಲ್ ಆಗಿದೆ. ಏಷ್ಯಾಕಪ್ನ ಮೊದಲ ಪಂದ್ಯದಲ್ಲಿ ಜಂಟಿ ಆತಿಥೇಯ ಪಾಕಿಸ್ತಾನ ತಂಡ ನೇಪಾಳ ಟೀಂ ವಿರುದ್ಧ ಕಣಕ್ಕಿಳಿಯಲಿದೆ.