ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೋಂಡಾ ಬುಡಕಟ್ಟು ಸಮುದಾಯದ ಯುವಕನೊಬ್ಬ ಎಂಬಿಬಿಎಸ್ ಕೋರ್ಸ್ಗಾಗಿ ನೀಟ್ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಎಕ್ಸಾಂ ಪಾಸ್ ಮಾಡಿದ್ದಾನೆ. ಈ 19 ವರ್ಷದ ಯುವಕ ಇತಿಹಾಸದಲ್ಲೇ ಬೋಂಡಾ ಸಮುದಾಯದಲ್ಲೇ ನೀಟ್ ಪರೀಕ್ಷೆ ಪಾಸ್ ಮಾಡಿದ ಮೊಟ್ಟ ಮೊದಲಿಗ ಎನಿಸಿಕೊಂಡಿದ್ದಾನೆ.
ಒಡಿಶಾದ ಮಲ್ಕಾನ್‌ಗಿರಿ ಜಿಲ್ಲೆಯ ಮುದುಳಿಪದವು ಪಂಚಾಯತ್‌ನ ಬದಬೆಲ್ ಗ್ರಾಮದ ಮಂಗಳ ಮುದುಳಿ (19) ನೀಟ್ ಅನ್ನು ಪಾಸ್ ಮಾಡಿದ ವಿದ್ಯಾರ್ಥಿ. ಸದ್ಯ ಎಂಬಿಬಿಎಸ್ ಕೋರ್ಸ್ಗಾಗಿ ಬೆರ್ಹಾಂಪುರದ ಎಮ್‌ಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಡ್ಮಿಷನ್ ಪಡೆದುಕೊಂಡಿದ್ದಾನೆ. ಇಡೀ ಬೋಂಡಾ ಬುಡಕಟ್ಟು ಸಮುದಾಯದ ಬಡ ಕುಟುಂಬದ ವಿದ್ಯಾರ್ಥಿ ಈ ಸಾಧನೆ ಮಾಡಿ ಮೊದಲಿಗ ಎಂದು ಗುರುತಿಸಿಕೊಂಡಿದ್ದಾನೆ.
ವಿದ್ಯಾರ್ಥಿ ಮಂಗಳ ಮುದುಳಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಪ್ರಮುಖವಾಗಿ ಕಾರಣರಾದವರು ಅವರ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಉತ್ಕಲ್ ಕೇಶರಿ ದಾಸ್. ಮಂಗಳ ಮುದುಳಿಯ ಓದಿನಲ್ಲಿ ಯಾವಾಗಲೂ ಚುರುಕಾಗಿದ್ದರಿಂದ ಓದನ್ನು ಮುಂದುವರೆಸುವಂತೆ ಅವರು ಒತ್ತಾಯಿಸಿದ್ದರು. ಅಂತೆಯೇ ಮಂಗಳ ಕೂಡ ಓದು ಮುಂದುವರಿಸಿ ನೀಟ್ನಲ್ಲಿ 348 ಮಾರ್ಕ್ಸ್ ಪಡೆದುಕೊಂಡಿದ್ದನು. ಇಂದು ಡಾಕ್ಟರ್ ಆಗಲು ಎಂಬಿಬಿಎಸ್‌ಗೆ ಪ್ರವೇಶ ಪಡೆದುಕೊಂಡಿದ್ದಾನೆ. ಅವರ ಸಮುದಾಯಕ್ಕೆ ಇದೊಂದು ಹೆಮ್ಮೆಯ ಸಂಗತಿಯಾಗಿದೆ.