ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋ ಅಂದ್ರೆ ಈಗ ಎಲ್ಲರಿಗೂ ಸಾಮನ್ಯವಾಗಿ ಬಿಟ್ಟಿದ್ದೆ. ಅಲ್ಲಿ ಓಪನ್ ಆಗಿಯೇ ಕಿಸ್ ಮಾಡುತ್ತಾರೆ, ಹಸ್ತಮೈಥುನ ಮಾಡಿಕೊಳ್ಳುತ್ತಾರೆ, ನಿದ್ರೆಯು ಮಾಡಿಕೊಳ್ಳುತ್ತಾರೆ, ಎಲ್ಲಾ ಮುಗಿದ್ರೆ ಕೊನೆಗೆ ಹೊಡೆದಾಡಿಕೊಳ್ಳುತ್ತಾರೆ.
ಹೌದು, ಈಗಂತೂ ದೆಹಲಿ ಮೆಟ್ರೋದಲ್ಲಿ ಇದೆಲ್ಲ ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ಇನ್ನೊಂದು ಘಟನೆಗೆ ದೆಹಲಿ ಮೆಟ್ರೋ ಸಾಕ್ಷಿಯಾಗಿದೆ. ಇಬ್ಬರು ವ್ಯಕ್ತಿಗಳು ಮೆಟ್ರೋದ ಒಳಗೆ ಹೊಡೆದಾಡಿಕೊಂಡಿರುವ ವೀಡಿಯೊ ಎಲ್ಲ ಕಡೆ ವೈರಲ್ ಆಗಿದೆ.
ಸೆಂಟ್ರಲ್ ಸೆಕ್ರೆಟರಿಯೇಟ್ ನಿಲ್ದಾಣದಲ್ಲಿ ಮೆಟ್ರೋ ರೈಲಿನೊಳಗೆ ಹೊಡೆದಾಡಿಕೊಂಡಿದ್ದಾರೆ.ವೈಲೆಟ್ ಲೈನ್ ಮೆಟ್ರೋ ರಾಜಾ ನಹರ್ ಸಿಂಗ್ನಿಂದ ಕಾಶ್ಮೀರ ಗೇಟ್ ಕಡೆಗೆ ಹೋಗುತ್ತಿದ್ದಾಗ ಈ ಇಬ್ಬರು ಪ್ರಯಾಣಿಕರು ಹೊಡೆದಾಡಿಕೊಂಡಿರುವ ವೀಡಿಯೊ ವೈರಲ್ ಆಗಿದೆ.
ಮೆಟ್ರೋದಲ್ಲಿ ಜನಸಂದಣಿ ಹೆಚ್ಚು, ಈ ಸಮಯದಲ್ಲಿ ತನ್ನ ಬ್ಯಾಗ್ನಿಂದ ವಸ್ತುಗಳನ್ನು ವ್ಯಕ್ತಿಯೊಬ್ಬ ಕದಿಯಲು ಪ್ರಯತ್ನಿಸುತ್ತಿದ್ದ ಎಂದು ಮತ್ತೊಬ್ಬ ವ್ಯಕ್ತಿ ಹೇಳಿದ್ದಾನೆ. ಈ ಸಮಯದಲ್ಲಿ ಇಬ್ಬರ ನಡುವೆ ವಾದ ಶುರುವಾಗಿ , ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ನಂತರ ಇಬ್ಬರ ನಡುವೆ ಜೋರಾಗಿ ಹೊಡೆದಾಟ ಶುರುವಾಗಿದೆ. ಇತರ ಪ್ರಯಾಣಿಕರು ಮಧ್ಯೆಪ್ರವೇಶ ಮಾಡಿ ಇಬ್ಬರನ್ನೂ ಸಮಾಧಾನ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಮಹಿಳೆಯರಿಬ್ಬರೂ ಜಗಳ ಮಾಡಿರುವ ಘಟನೆ ಮೆಟ್ರೋದ ಮಧ್ಯೆ ಮಹಿಳಾ ಕೋಚ್‌ನಲ್ಲಿ ನಡೆದಿದೆ. ಪ್ರೇಮಿಗಳು ಪರಸ್ಪರ ಚುಂಬಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಘಟನೆಯ ಬಗ್ಗೆ ಎಚ್ಚರ ವಹಿಸಿವಂತೆ ದೆಹಲಿ ಮೆಟ್ರೋ ರೈಲು ನಿಗಮಗೆ (ಡಿಎಂಆರ್‌ಸಿ) ಪ್ರಯಾಣಿಕರು ಒತ್ತಾಯಿಸಿದ್ದಾರೆ.