FUN FACTS | ಪ್ರೀತಿಯಲ್ಲಿ ಬಿದ್ದ ಹುಡುಗರು ಹೀಗೆಲ್ಲಾ ಮಾಡ್ತಾರೆ!!

ಹುಡುಗರು ಹೇಗಾದ್ರೂ ಇರಲಿ, ಪ್ರೀತಿಗೆ ಬಿದ್ದ ಮೇಲೆ ತುಂಬಾನೇ ಬದಲಾಗ್ತಾರೆ. ನಂಬೋದಿಲ್ಲ ಅಂದ್ರೆ ನಿಮ್ಮ ಸುತ್ತಮುತ್ತಲಿನ ಹುಡುಗರನ್ನೇ ನೋಡಿ, ಪ್ರೀತಿಗೆ ಬೀಳೋಕೂ ಮುಂಚೆ ಹೇಗಿದ್ರು ಈಗ ಹೇಗಾಗಿದ್ದಾರೆ ಅಲ್ವಾ?

ಪ್ರೀತಿ ಮೆದುಳಿನ ಜೊತೆ ಹೇಗೆ ಆಟ ಆಡತ್ತೆ, ಹುಡುಗರು ಹೇಗೆಲ್ಲಾ ಬದಲಾಗ್ತಾರೆ ಫನ್ ಫ್ಯಾಕ್ಟ್ಸ್ ಇಲ್ಲಿದೆ..

  • ಯಾವಾಗಲೂ ಖುಷಿಯಾಗಿರ‍್ತಾರೆ, ಖುಷಿಗೆ ಕಾರಣವೇ ಬೇಕಿಲ್ಲ.
  • ಯಾವಾಗಲೂ ಪಾಸಿಟಿವ್ ಆಗಿ ಇರ‍್ತಾರೆ, ಎಲ್ಲ ನೆನಪುಗಳಲ್ಲೂ ಒಳ್ಳೆಯದನ್ನು ಮಾತ್ರ ಆರಿಸ್ತಾನೆ.
  • ಸೋಶಿಯಲ್ ಜಡ್ಜ್‌ಮೆಂಟ್ ತೆಗೆದುಕೊಳ್ಳೋದಕ್ಕೆ ಪ್ರೀತಿ ಅಡ್ಡ ಬರುತ್ತದೆ.
  • ಸುತ್ತಮುತ್ತಲು ಇರೋ ಯಾರೂ ಬೇಕಿಲ್ಲ, ಪ್ರೀತಿಸಿದಾಕೆ ಇದ್ರೆ ಸಾಕು
  • ಮಹಿಳೆಯರಿಗಿಂತ ಪುರುಷರು ಬೇಗ ಪ್ರೀತಿಯಲ್ಲಿ ಬೀಳ್ತಾರೆ.
  • ಪ್ರೀತಿಯಲ್ಲಿರೋ ಪುರುಷರಿಗೆ ನೋವು ಕಮ್ಮಿ, ಯಾವ ದೈಹಿಕ ನೋವು ಹೆಚ್ಚು ಅನಿಸೋದಿಲ್ಲ.
  • ಧೂಮಪಾನದಂಥ ಕೆಟ್ಟ ಅಭ್ಯಾಸವನ್ನು ಕೂಡ ಹುಡುಗರು ಪ್ರೀತಿಗಾಗಿ ಬಿಟ್ಟುಬಿಡ್ತಾರೆ.
  • ಹುಡುಗಿಯ ಭಾವನೆಗಳಿಗೆ ಹೆಚ್ಚು ಬೆಲೆ ಕೊಡೋದಕ್ಕೆ ಆರಂಭಿಸ್ತಾರೆ, ಸ್ನೇಹಿತರ ಜೊತೆಗಿಂತ ಹುಡುಗಿಯ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ. ಸ್ನೇಹಿತರ ಜೊತೆ ಇದ್ದರೂ ಆಕೆ ಬಗ್ಗೆಯೇ ಯೋಚಿಸ್ತಾರೆ.
  • ಯಾವ ವಿಷಯದ ಬಗ್ಗೆ ಫೋಕಸ್ ಬೇಕು ಆ ವಿಷಯದ ಬಗ್ಗೆ ಮಾತ್ರ ಫೋಕಸ್ ಇರುತ್ತದೆ. ಬೇರೆಲ್ಲಾ ವಿಷಯಗಳನ್ನು ಆಕೆಗೋಸ್ಕರ ಇಗ್ನೋರ್ ಮಾಡ್ತಾರೆ.
  • ಬೇರೆಯವರಿಗೆ, ಆಕೆ ಎದುರಿದ್ದಾಗ ಅತಿಯಾದ ಕರುಣೆ ತೋರಿಸ್ತಾರೆ, ಎಲ್ಲ ಸಹಾಯಕ್ಕೂ ಮುಂದಾಗ್ತಾರೆ. ಪ್ರೀತಿಯಲ್ಲಿ ಬಿದ್ದ ಮೇಲೂ ಆಕೆಯನ್ನು ಇಂಪ್ರೆಸ್ ಮಾಡೋದು ನಿಲ್ಲಿಸೋದಿಲ್ಲ.
  • ನಾನು ಅನ್ನೋ ಬದಲು ನಾವು ಅನ್ನೋ ಪದಬಳಕೆ ಆರಂಭವಾಗುತ್ತದೆ.
  • ದೈಹಿಕ ಸ್ಪರ್ಶಕ್ಕಾಗಿ ಹಾತೊರೆಯುತ್ತಾರೆ, ಆಕೆಯ ಕೈ ಹಿಡಿದುಕೊಳ್ಳೋದರಲ್ಲಿಯೂ ರೋಮಾಂಚನದ ಅನುಭವ ಆಗುತ್ತದೆ.
  • ಟೈಮ್ ಬಗ್ಗೆ ಚಿಂತೆಯೇ ಇಲ್ಲ, ರಾತ್ರಿಯಿಡೀ ಕುಂಭಕರಣನ ನಿದ್ದೆ ಮಾಡೋ ಹುಡುಗ ಅವಳ ಮೆಸೇಜ್ ಸೌಂಡ್‌ಗೂ ಎದ್ದು ಕೂರ‍್ತಾರೆ, ಮೆದುಳು ಅಷ್ಟು ಅಲರ್ಟ್ ಆಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!