March 6, 2026
Friday, March 6, 2026
spot_img

ಕ್ರಿಕೆಟ್ ಹವಾ ಅಂದ್ರೆ ಹೀಗಿರ್ಬೇಕು! ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಎಷ್ಟು ಜನ ನೋಡಿದ್ದಾರೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 2026ರ ಟಿ20 ವಿಶ್ವಕಪ್ ಎರಡನೇ ಸೆಮಿಫೈನಲ್ ಪಂದ್ಯ ಕ್ರಿಕೆಟ್ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಈ ರೋಚಕ ಪಂದ್ಯದಲ್ಲಿ ರನ್‌ಗಳ ಮಳೆಯಷ್ಟೇ ಅಲ್ಲ, ವೀಕ್ಷಕರ ಸಂಖ್ಯೆಯಲ್ಲೂ ಹೊಸ ವಿಶ್ವದಾಖಲೆ ನಿರ್ಮಾಣವಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 253 ರನ್ ಗಳಿಸಿತು. ಈ ಮೂಲಕ ಟೀಂ ಇಂಡಿಯಾ ಟಿ20 ವಿಶ್ವಕಪ್ ನಾಕೌಟ್ ಹಂತದಲ್ಲಿ ದಾಖಲಾದ ಅತ್ಯಧಿಕ ಮೊತ್ತವನ್ನು ದಾಖಲಿಸಿತು. ದೊಡ್ಡ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಕೊನೆಯವರೆಗೂ ಹೋರಾಟ ನಡೆಸಿದರೂ 246 ರನ್ ಗಳಿಸಿ 7 ರನ್ ಅಂತರದಿಂದ ಸೋಲನುಭವಿಸಿತು.

ಇದನ್ನೂ ಓದಿ:

ಈ ಪಂದ್ಯ ಡಿಜಿಟಲ್ ವೀಕ್ಷಣೆಯಲ್ಲೂ ಹೊಸ ಇತಿಹಾಸ ಬರೆದಿದೆ. ಐಸಿಸಿ ಅಧ್ಯಕ್ಷ ಜಯ್ ಶಾ ಅವರ ಪ್ರಕಾರ, ಜಿಯೋ ಹಾಟ್‌ಸ್ಟಾರ್‌ನಲ್ಲಿ ನಡೆದ ಲೈವ್ ಪ್ರಸಾರವನ್ನು ಗರಿಷ್ಠ 65.2 ಮಿಲಿಯನ್ ವೀಕ್ಷಕರು ಒಂದೇ ವೇಳೆ ವೀಕ್ಷಿಸಿದ್ದು, ಇದು ಯಾವುದೇ ಲೈವ್ ಕಾರ್ಯಕ್ರಮಕ್ಕಿಂತಲೂ ಹೆಚ್ಚು ಎಂದು ತಿಳಿಸಿದ್ದಾರೆ.

ರನ್‌ಗಳ ದೃಷ್ಟಿಯಿಂದಲೂ ಈ ಪಂದ್ಯ ವಿಶೇಷವಾಗಿದ್ದು, ಎರಡು ತಂಡಗಳು ಸೇರಿ ಒಟ್ಟು 499 ರನ್ ಕಲೆಹಾಕಿದವು. ಇದು ಟಿ20 ವಿಶ್ವಕಪ್ ಪಂದ್ಯವೊಂದರಲ್ಲಿ ದಾಖಲಾದ ಅತಿ ಹೆಚ್ಚು ಮೊತ್ತವಾಗಿದೆ.

ಸಿಕ್ಸರ್‌ಗಳಲ್ಲೂ ದಾಖಲೆ ನಿರ್ಮಾಣವಾಗಿದ್ದು ಭಾರತ 19 ಮತ್ತು ಇಂಗ್ಲೆಂಡ್ 15 ಸಿಕ್ಸರ್‌ಗಳನ್ನು ಬಾರಿಸಿತು. ಒಟ್ಟಾರೆ 34 ಸಿಕ್ಸರ್‌ಗಳು ದಾಖಲಾಗಿವೆ. ಜೊತೆಗೆ ಎರಡು ತಂಡಗಳ ಬ್ಯಾಟ್ಸ್‌ಮನ್‌ಗಳು ಒಟ್ಟು 73 ಬೌಂಡರಿಗಳನ್ನು ಬಾರಿಸಿ ಮತ್ತೊಂದು ಹೊಸ ದಾಖಲೆಗೆ ಸಾಕ್ಷಿಯಾದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !