ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲೆಗೆ ಹೋಗಲ್ಲ ಎಂದು ಹಠ ಮಾಡುತ್ತಿದ್ದ ಮೊಮ್ಮಗನನ್ನು ರಜನಿಕಾಂತ್ ಅವರೇ ಶಾಲೆಗೆ ಬಿಟ್ಟು ಬಂದಿದ್ದಾರೆ. ಈ ವಿಚಾರವನ್ನು ರಜನಿಕಾಂತ್ ಮಗಳು ಹಂಚಿಕೊಂಡಿದ್ದಾರೆ.
ಐಶ್ವರ್ಯಾ ಸೋಶಿಯಲ್ ಮೀಡಿಯಾದಲ್ಲಿ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಒಂದು ಚಿತ್ರದಲ್ಲಿ, ರಜನಿಕಾಂತ್ ತನ್ನ ಮೊಮ್ಮಗನೊಂದಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಇನ್ನೊಂದು ಚಿತ್ರದಲ್ಲಿ ರಜನಿಕಾಂತ್ ಅವರನ್ನು ತರಗತಿಯಲ್ಲಿ ಕಾಣಬಹುದು. ಶಾಲಾ ಮಕ್ಕಳು ರಜನಿಕಾಂತ್ ಅವರನ್ನು ಭೇಟಿ ಮಾಡಲು ತುಂಬಾ ಖುಷಿಯಾಗಿದ್ದಾರೆ.
ನನ್ನ ಮಗನಿಗೆ ಇಂದು ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ಸೂಪರ್ ಸ್ಟಾರ್ ಅವನನ್ನು ಶಾಲೆಗೆ ಕರೆದುಕೊಂಡು ಹೋಗಿದ್ದಾರೆ. ನೀವು ಕೆಲಸ ಮಾಡಿದ ಪ್ರತಿಯೊಂದು ಪಾತ್ರವೂ ಅದ್ಭುತವಾಗಿದೆ. ಆಫ್ ಸ್ಕ್ರೀನ್ ನೀವು ನನ್ನ ಪ್ರೀತಿಯ ತಂದೆ ಎಂದು ಸೌಂದರ್ಯ ರಜನಿಕಾಂತ್ ಬರೆದುಕೊಂಡಿದ್ದಾರೆ.
View this post on Instagram