Friday, December 19, 2025

ಪಾಕಿಸ್ತಾನದಲ್ಲಿ ಕೋಲಾಹಲ ಸೃಷ್ಟಿಸಿದ ಈ ಕಬಡ್ಡಿ ಕ್ರೀಡಾಪಟುವಿನ ನಡೆ: ಅಂತಹದ್ದೇನು ಮಾಡಿದ ಗೊತ್ತಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ಪಾಕಿಸ್ತಾನ ನಡುವೆ ಗಡಿ ಆಗಿರಲಿ, ಕ್ರೀಡೆ ಆಗಿರಲಿ, ಇಲ್ಲಿ ಯಾರೂ ಕೂಡ ಸೋಲು ಸಹಿಸುವುದಿಲ್ಲ. ಉಭಯ ದೇಶದ ಅಭಿಮಾನಿಗಳಿಗೆ ಗೆಲುವೇ ಬೇಕು. ಇತ್ತ ಆಟಗಾರರು ತೀವ್ರ ಜಿದ್ದಾಜಿದ್ದಿನಿಂದ ಹೋರಾಡುತ್ತಾರೆ. ಇಂತಹ ಪರಿಸ್ಥಿತಿ ಹೀಗಿರುವಾಗ ಪಾಕಿಸ್ತಾನದ ಆಟಗಾರ ಭಾರತ ತಂಡ ಪ್ರತಿನಿಧಿಸಿದರೆ ಹೇಗಿರುತ್ತೆ?

ಹೌದು, ಬಹ್ರೇನ್‌ನಲ್ಲಿ ಆಯೋಜನೆಗೊಂಡಿದ್ದ ಕಬಡ್ಡಿ ಟೂರ್ನಿಯಲ್ಲಿ ಪಾಕಿಸ್ತಾನದ ಖ್ಯಾತ ಕಬಡ್ಡಿ ಪಟ್ಟು ಉಬೈದುಲ್ಲ ರಜಪೂತ್ ಭಾರತ ತಂಡ ಪ್ರತಿನಿಧಿಸಿದ್ದಾರೆ. ಈ ಟೂರ್ನಿಯಲ್ಲಿ ಸಂಪೂರ್ಣವಾಗಿ ಭಾರತ ತಂಡದ ಪರ ಆಡಿದ್ದಾರೆ. ಇದು ಪಾಕಿಸ್ತಾನದಲ್ಲಿ ಕೋಲಾಹಲ ಸೃಷ್ಟಿಸಿದೆ.

ಬಹ್ರೇನ್‌ನಲ್ಲಿ ಜಿಸಿಸಿ ಕಪ್ ಕಬಡ್ಡಿ ಟೂರ್ನಿ ಆಯೋಜನೆಗೊಂಡಿತ್ತು. ಖಾಸಗಿ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಇರಾನ್,ಕೆನಡಾ ಸೇರಿದಂತೆ ಹಲವು ತಂಡಗಳು ಪಾಲ್ಗೊಂಡಿತ್ತು. ಪಾಕಿಸ್ತಾನದ ಕಬಡ್ಡಿ ಪಟು ಭಾರತ ತಂಡದಲ್ಲಿ ಆಡಿದ್ದಾರೆ. ಪಾಕಿಸ್ತಾನ ಕಬಡ್ಡಿ ಪಟು ಭಾರತ ತಂಡದ ಜರ್ಸಿ ಹಾಗೂ ಭಾರತದ ತಿರಂಗ ಹಿಡಿದು ಕೋರ್ಟ್‌ಗೆ ಬಂದ ವಿಡಿಯೋ, ಫೋಟೋ ನೋಡಿ ಕೆರಳಿದೆ.

ತುರ್ತು ಸಭೆ ಕರೆದ ಪಾಕಿಸ್ತಾನ ಕಬಡ್ಡಿ ಫೆಡರೇಶನ್
ಪಾಕಿಸ್ತಾನ ಕಬಡ್ಡಿ ಪಟ್ಟು ಉಬೈದುಲ್ಲಾ ರಜಪೂತ್ ನಡೆಯನ್ನು ಪಾಕಿಸ್ತಾನ ತೀವ್ರವಾಗಿ ವಿರೋಧಿಸಿದೆ. ಪ್ರಮುಖವಾಗಿ ಕಬಡ್ಡಿ ಫೆಡರೇಶನ್ ತುರ್ತು ಸಭೆ ಕರೆದಿದೆ. ಉಬೈದುಲ್ಲಾ ರಜಪೂತ್ ಜೊತೆಗೆ ಈ ಟೂರ್ನಿಯಲ್ಲಿ ಪಾಲ್ಗೊಂಡ ಇತರ ಪಾಕಿಸ್ತಾನ ಕಬಡ್ಡಿ ಆಟಗಾರರ ಮೇಲೆ ಕಠಿಣ ಶಿಸ್ತು ಕ್ರಮ ಕೈಗೊಳ್ಳಲು ಸಭೆ ಕರೆದಿದೆ.

ಉಬೈದುಲ್ಲಾ ಭಾರತ ತಂಡ ಪ್ರತಿನಿಧಿಸಿದ್ದು ಹೇಗೆ?
ಜಿಸಿಸಿ ಕಪ್ ಬಹ್ರೇನ್ ಕಬಡ್ಡಿ ಟೂರ್ನಿ ಸಂಪೂರ್ಣ ಖಾಸಗಿ ಟೂರ್ನಿಯಾಗಿದೆ. ಖಾಈ ಟೂರ್ನಿಯ ಯಾವುದೇ ಲೀಗ್, ಫೆಡರೇಶನ್ ಅಡಿಯಲ್ಲಿ ಬರುವುದಿಲ್ಲ. ಕಳೆದ ಆವೃತ್ತಿ ವರೆಗೆ ಐಪಿಎಲ್ ರೀತಿಯ ಪ್ರಮುಖ ಆಟಗಾರರು ಮಿಕ್ಸ್ ಮಾಡಿ ಆಡಲಾಗುತ್ತಿತ್ತು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಅವರವರ ದೇಶದ ಆಟಗಾರರು ಪ್ರತಿನಿಧಿಸಿದ್ದರು. ಈ ಪೈಕಿ ಪಾಕಿಸ್ತಾನ ಆಟಗಾರನ ಭಾರತೀಯರು ಹೆಚ್ಚಿದ್ದ ತಂಡದಲ್ಲಿ ಸ್ಥಾನ ಸಿಕ್ಕಿತ್ತು. ಇಲ್ಲಿ ಭಾರತ, ಪಾಕಿಸ್ತಾನ, ಕೆನಡಾ ಎಂಬ ತಂಡಗಳು ಇರಲಿಲ್ಲ. ಆದರೆ ಗೆಲುವಿನ ಬಳಿಕ ಈ ರೀತಿ ಬಿಂಬಿಸಲಾಗಿದೆ.

ಈ ಕುರಿತು ಉಬೈದುಲ್ಲಾ ರಜಪೂತ್ ಸ್ಪಷ್ಟನೆ ನೀಡಿದ್ದಾರೆ. ಆದರೆ ಪಾಕಿಸ್ತಾನ ಕೆರಳಿ ಕೆಂಡವಾಗಿದೆ. ಪಾಕಿಸ್ತಾನ ಕಬಡ್ಡಿ ಫೆಡರೇಶನ್ ಅನುಮತಿ ಇಲ್ಲದೆ ಉಬೈದುಲ್ಲಾ ಹಾಗೂ ಇತರ ಕೆಲ ಆಟಗಾರರು ಟೂರ್ನಿ ಆಡಿದ್ದಾರೆ. ಇದು ಹೇಗೆ ಸಾಧ್ಯ, ಭಾರತ ಜರ್ಸಿ, ತಿರಂಗ ಹಿಡಿದ ವಿಡಿಯೋಗಳು ವೈರಲ್ ಆಗಿದೆ.ಸದ್ಯದ ಪರಿಸ್ಥಿತಿಯಲ್ಲಿ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕಬಡ್ಡಿ ಫೆಡರೇಶನ್ ಹೇಳಿದೆ.

error: Content is protected !!