RCBನ ಯಾವತ್ತೂ ಈ ವ್ಯಕ್ತಿ ಮರೆತಿಲ್ಲ, ಬಿಟ್ಟುಕೊಟ್ಟಿಲ್ಲ.. ಇದಕ್ಕೆ ಅಲ್ವಾ ಹೇಳೋದು Loyalty ಅಂತ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

IPL 2025 ​ನ ಫೈನಲ್ ಪಂದ್ಯವು ಜೂನ್ 3 ರಂದು ನಡೆಯಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಇಡಯಂನಲ್ಲಿ ನಡೆಯಲಿರುವ ಈ ರಣರೋಚಕ ಪಂದ್ಯದಲ್ಲಿ ಆರ್​ಸಿಬಿ ತಂಡ ಕಣಕ್ಕಿಳಿಯುವುದು ಈಗಾಗಲೇ ಖಚಿತವಾಗಿದೆ.

ಇನ್ನು ಫೈನಲ್​ಗೇರಲು ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಭಾರಿ ಪೈಪೋಟಿ ಇದ್ದು, ಇದರಲ್ಲಿ ಒಂದು ತಂಡ ಜೂನ್ 3 ರಂದು ಆರ್​ಸಿಬಿ ವಿರುದ್ಧ ಫೈನಲ್ ಪಂದ್ಯವಾಡಲಿದೆ.

ಈ ಗೆಲುವಿನ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

“ಪಂಜಾಬ್ ಕಿಂಗ್ಸ್​ ವಿರುದ್ಧ ಏಕಪಕ್ಷೀಯವಾಗಿ ಗೆಲುವು ಸಾಧಿಸಿ ಐಪಿಎಲ್ ಫೈನಲ್‌ಗೆ ಪ್ರವೇಶಿಸಿದ್ದಕ್ಕಾಗಿ ಆರ್‌ಸಿಬಿಗೆ ಅಭಿನಂದನೆಗಳು. ಒತ್ತಡದ ಸ್ಪರ್ಧೆಯಲ್ಲಿ ಅತ್ಯುತ್ತಮ ಆಲ್-ರೌಂಡ್ ಪ್ರದರ್ಶನ ಇದು. ಪ್ರಶಸ್ತಿಯತ್ತ ಮುಂದುವರಿಯಿರಿ” ಎಂದು ವಿಜಯ್ ಮಲ್ಯ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಫೈನಲ್ ಪಂದ್ಯದಲೂ ಧೈರ್ಯದಿಂದ ಆಡಬೇಕೆಂಬ ಸಂದೇಶವನ್ನು ಕೂಡ ರವಾನಿಸಿದ್ದಾರೆ. ಇದೀಗ ವಿಜಯ್ ಮಲ್ಯ ಅವರ ಪೋಸ್ಟ್ ವೈರಲ್ ಆಗಿದ್ದು, ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!