ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲ ನಟ ನಟಿಯರು ಸಾಮಾಜಿಕ ವೇದಿಕೆಗಳಲ್ಲಿ ಮಾತನಾಡುವ ಸಂದರ್ಭ ಸಾಕಷ್ಟು ಬಾರಿ ಎದುರಾಗುತ್ತದೆ. ಆದರೆ ಸಿನಿಮಾದಲ್ಲಿ ಎಷ್ಟೇ ಬೋಲ್ಡ್ ಆದ ನಟನೆ ಮಾಡಿದರೂ ನಿಜಜೀವನದಲ್ಲಿ ಮಾತನಾಡಲು ಕಷ್ಟಪಡುತ್ತಾರೆ.
ಈ ಸಾಲಿಗೆ ಆಲಿಯಾ ಭಟ್ ಕೂಡ ಸೇರಿದ್ದಾರೆ. ಒಂದು ಸಿನಿಮಾ ನಂತರ ಈ ಭಯ ಹೊರಟು ಹೋಯ್ತಂತೆ. ಈ ಸಿನಿಮಾ ನಂತರ ಆಲಿಯಾ ಸ್ಟೇಜ್ ಮೇಲೆ ನಿಂತು ಮಾತನಾಡೋಕೆ ಹೆದರೋದಿಲ್ವಂತೆ, ಯಾವ ಸಿನಿಮಾ ಗೊತ್ತಾ? ಆಲಿಯಾ ಸಾಕಷ್ಟು ಬೋಲ್ಡ್ ಅಭಿನಯ ಮಾಡಿರುವ ಗಂಗೂಬಾಯಿ ಕಾಥಿಯಾವಾಡಿ.
ಹೌದು ಈ ಸಿನಿಮಾದಲ್ಲಿ ಗಂಗೂ ಸಾಕಷ್ಟು ಭಾಷಣ ಮಾಡಿದ್ದಾರೆ. ನಾಯಕಿಯೂ ಆಗಿದ್ದಾರೆ. ಪಾತ್ರಕ್ಕೆ ಜೀವ ತುಂಬುತ್ತಾ ಆಲಿಯಾ ತಮ್ಮನ್ನೇ ಮರೆತುಹೋಗಿದ್ದರಂತೆ. ಯಾರ ಬಳಿಯೂ ಮಾತನಾಡೋದಕ್ಕೆ ಹಿಂಜರಿಕೆ ಇಲ್ಲವಂತೆ.
ಎಷ್ಟರ ಮಟ್ಟಿಗೆ ಆಲಿಯಾ ಪಾತ್ರದಲ್ಲಿ ಮುಳುಗಿದ್ದರು ಎಂದರೆ ಕೆಲ ಸಮಯ ಯಾರು ಮಾತನಾಡಿಸಿದರೂ ಗಂಗೂ ರೀತಿಯೇ ಆಲಿಯಾ ಉತ್ತರ ಕೊಡುತ್ತಿದ್ದರಂತೆ!