ಮನೆಯ ಸುತ್ತಮುತ್ತ, ಪೊದೆ ಅಥವಾ ಖಾಲಿ ಜಾಗಗಳಲ್ಲಿ, ಬಣ್ಣಬಣ್ಣದ ಕಾಗದದಂತೆ ಕಾಣುವ ಬೌಗೆನ್ವಿಲ್ಲಾ (Bougainvillea) ಹೂವುಗಳು ನಿಮ್ಮ ಗಮನ ಸೆಳೆದಿರಬಹುದು. ಸುಗಂಧವಿಲ್ಲದ ಕಾರಣದಿಂದ ದೇವರ ಪೂಜೆಗೆ ಬಳಸಲಾಗದ ಈ ಹೂವಿಗೆ ಆಯುರ್ವೇದದಲ್ಲಿ ವಿಶೇಷ ಸ್ಥಾನವಿದೆ. ಸಾಮಾನ್ಯವಾಗಿ ಅಂದಕ್ಕಾಗಿ ಬೆಳೆಯಲ್ಪಡುವ ಈ ಸಸ್ಯ, ಮಧುಮೇಹದ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ತಜ್ಞರು ಹೇಳುತ್ತಾರೆ.
ಸಕ್ಕರೆ ನಿಯಂತ್ರಣಕ್ಕೆ ರಾಮಬಾಣ:
ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಹೆಚ್ಚಾಗುವ ಕಾರಣದಿಂದ ಉಂಟಾಗುವ ಅನೇಕ ಸಮಸ್ಯೆಗಳಿಗೆ ಈ ಹೂವು ಪರಿಹಾರ ನೀಡುತ್ತದೆ. ಹೂವನ್ನು ಒಣಗಿಸಿ ಪುಡಿ ಮಾಡಿ ಸೇವಿಸುವುದರಿಂದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇರುತ್ತದೆ.
ಹೂವಿನ ಪುಡಿಯನ್ನು ಹಾಲು ಅಥವಾ ನೀರಿನಲ್ಲಿ ಮಿಶ್ರಗೊಳಿಸಿ ಪ್ರತಿದಿನ ಸೇವಿಸುವ ಮೂಲಕ ನೈಸರ್ಗಿಕ ರೀತಿಯಲ್ಲಿ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯ. ನಿಯಮಿತ ಸೇವನೆಯಿಂದ ರೋಗದ ಬಿಗಿತವನ್ನು ತಗ್ಗಿಸಲು ಹಾಗೂ ಇತರ ಅಡ್ಡ ಪರಿಣಾಮಗಳನ್ನು ತಡೆಯಲು ಸಹಾಯವಾಗಬಹುದು.
ಗಮನಿಸಿ: ಈ ಹೂವು ಔಷಧಿಯ ಗುಣವಿದೆಯಾದರು, ಯಾವುದೇ ಹೋಮ್ ರೆಮಿಡಿ ಸೇವನೆಗೆ ಮೊದಲು ವೈದ್ಯರ ಸಲಹೆ ಅವಶ್ಯಕ.(ಸಾಮಾಜಿಕ ಜಾಲತಾಣದಲ್ಲಿ ದೊರೆತ ಮಾಹಿತಿಯ ಆಧಾರದ ಮೇಲೆ ಈ ಲೇಖನ ಪ್ರಕಟವಾಗಿದೆ)