August 31, 2026
Monday, August 31, 2026
spot_img

ಈ ಬಾರಿ ಬಿಗ್‌ಬಾಸ್‌ಗೆ ನಟಿ ಅರ್ಚನಾ ಕೊಟ್ಟಿಗೆ ಬರಬೇಕು: ಟೀಂಗೆ ಫ್ಯಾನ್ಸ್‌ ಒತ್ತಾಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ಬಾರಿಯ ಬಿಗ್‌ಬಾಸ್‌ಗೆ ನಟಿ ಅರ್ಚನಾ ಕೊಟ್ಟಿಗೆ ಬರಬೇಕು ಅಂತ ಫ್ಯಾನ್ಸ್‌ ಡಿಮ್ಯಾಂಡ್‌ ಮಾಡ್ತಾ ಇದ್ದಾರೆ. ಬಿಗ್‌ಬಾಸ್‌ ಟೀಂಗೆ ಸೋಶಿಯಲ್‌ ಮೀಡಿಯಾ ಹಾಗೂ ಆಫ್‌ಲೈನ್‌ನಲ್ಲಿಯೂ ಈ ಬಾರಿ ಅರ್ಚನಾ ಅವರನ್ನು ದೊಡ್ಮನೆಗೆ ಕಳಿಸಿ ಪಕ್ಕಾ ವಿನ್‌ ಆಗ್ತಾರೆ ಎಂದು ಹೇಳ್ತಿದ್ದಾರೆ.

ಇಷ್ಟು ಸಮಯದಿಂದಲೂ ಜನರನ್ನು ರಂಜಿಸಿಕೊಂಡು ಬಂದಿರುವ ನಟಿ ಅರ್ಚನಾ ಇತ್ತೀಚೆಗೆ ನಡೆದ ಯುಟ್ಯೂಬ್‌ ಇಂಟರ್‌ವ್ಯೂನಿಂದ ಇನ್ನಷ್ಟು ಫೇಮಸ್‌ ಆಗಿದ್ದಾರೆ. ಅವರ ನೇಚರ್‌, ಫನ್ನಿ ಕ್ಯಾರೆಕ್ಟರ್‌ನಿಂದಾಗಿ ಅರ್ಚನಾ ಬಿಗ್‌ಬಾಸ್‌ಗೆ ಹೋಗೋಕೆ ಒಳ್ಳೆ ಕ್ಯಾಂಡಿಡೇಟ್‌ ಎಂದು ಜನ ಹೇಳ್ತಿದ್ದಾರೆ.

ಅರ್ಚನಾ ಕೊಟ್ಟಿಗೆ ಅವರು ಮೊದಲು ನಟಿಸಿದ್ದು 2018ರಲ್ಲಿ. ‘ಅರಣ್ಯಕಾಂಡ’ ಅವರ ಮೊದಲ ಸಿನಿಮಾ. ಆ ಬಳಿಕ ‘ವಾಸು ನಾನ್ ಪಕ್ಕ ಕಮರ್ಷಿಯಲ್’, ‘ಡಿಯರ್ ಸತ್ಯ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರು. ಅವರ ನಟನೆಯ ‘ಎಲ್ಲರ ಕಾಲೆಳೆಯುತ್ತೆ ಕಾಲ’ ಈ ವರ್ಷ ತೆರೆಗೆ ಬಂದಿದೆ. ಕಳೆದ ವರ್ಷ ಅವರ ವಿವಾಹ ಕೂಡ ಆಗಿದೆ. ಈಗ ಅರ್ಚನಾ ಬಿಗ್ ಬಾಸ್​​ಗೆ ಬರುತ್ತಾರಾ ಎಂಬ ಪ್ರಶ್ನೆ ಮೂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !