ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಆಪರೇಷನ್ ಕಮಲ ಮಾಡಲ್ಲ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ್ರೆ ಮುಸ್ಲಿಂರ ಮೀಸಲಾತಿ ಕೋಟಾ ಮರುಸ್ಥಾಪನೆ ಮಾಡುತ್ತೇವೆ ಎಂಬ ಡಿಕೆಶಿ ಹೇಳಿಕೆಗೆ, ಧಮ್, ತಾಕತ್ ಇದ್ರೆ ಮೀಸಲಾತಿ ತೆಗೆಯಲಿ ಎಂದು ಯತ್ನಾಳ್ ಟಾಂಗ್ ನೀಡಿದ್ದಾರೆ. ಟಾಂಗ್ ನೀಡಿದರು.
ಲಿಂಗಾಯತರು, ಒಕ್ಕಲಿಗ ಸಮುದಾಯದ ದೊಡ್ಡ ಶಕ್ತಿ ಇದೆ, ಮೀಸಲಾತಿ ತೆಗೆದರೆ ಸರ್ವನಾಶ ಆಗುತ್ತಾರೆ. ಅವರ ಮುಸ್ಲಿಂ ಸೋದರರಿಗಾಗಿ ಈ ಹೇಳಿಕೆ ನೀಡಿದ್ದಾರೆ. ಈ ರೀತಿ ಮಾಡಿದ್ರೆ ಡಿಕೆಶಿ ಮೆಕ್ಕಾ ಮದೀನಾಗೆ ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ.ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ಆಪರೇಷನ್ ಕಮಲ ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಪಂಚಮಸಾಲಿಗೆ 2 ಡಿ ಮೀಸಲಾತಿ ಘೋಷಣೆ ಮಾಡಿ ಸಿಎಂ ಬೊಮ್ಮಾಯಿ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ಮೋದಿ , ಅಮಿತ್ ಶಾ ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.