BUDGET | ಈ ಬಾರಿ ಕುಳಿತುಕೊಂಡೇ ಬಜೆಟ್‌ ಮಂಡನೆ ಮಾಡಲಿದ್ದಾರೆ ಸಿದ್ದರಾಮಯ್ಯ, ಕಾರಣ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಿಎಂ ಸಿದ್ದರಾಮಯ್ಯ ಇಂದು ದಾಖಲೆಯ 16ನೇ ಬಜೆಟ್ ಮಂಡಿಸಲಿದ್ದಾರೆ. ಅಭಿವೃದ್ಧಿ ಕಾರ್ಯ ಮತ್ತು ಗ್ಯಾರಂಟಿಗಳನ್ನು ಬ್ಯಾಲೆನ್ಸ್ ಮಾಡುವ ದೊಡ್ಡ ಸವಾಲು ಸಿಎಂ ಮುಂದಿದ್ದು, ಎಲ್ಲರೂ ಬಜೆಟ್‌ನ್ನು ಎದುರು ನೋಡುತ್ತಿದ್ದಾರೆ. ಈ ಬಾರಿ ಸಿಎಂ ಸಿದ್ದರಾಮಯ್ಯ ಕುಳಿತುಕೊಂಡೇ ಬಜೆಟ್‌ ಮಂಡನೆ ಮಾಡಲಿದ್ದಾರೆ.

ಮಂಡಿನೋವಿನ ಕಾರಣ ಸಿಎಂ ಆರಂಭದ 10 ನಿಮಿಷ ಮಾತ್ರ ನಿಂತು ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ. ದಾಟುವ ನಿರೀಕ್ಷೆ ಇದೆ. ಅಂದಾಜು 1.25 ಲಕ್ಷ ಕೋಟಿ ರೂ. ಸಾಲದ ಪ್ರಸ್ತಾಪ ಮಾಡುವ ಸಂಭವ ಇದೆ.  

ಶುಕ್ರವಾರ ರಾಹುಕಾಲ ಬೆಳಗ್ಗೆ 10:30ಕ್ಕೆ ಆರಂಭವಾಗುತ್ತದೆ. ರಾಹುಕಾಲ ಶುರುವಾಗುವ ಮುನ್ನ ಅಂದ್ರೆ ಬೆಳಗ್ಗೆ 10:15ಕ್ಕೆ ಸಿಎಂ ಬಜೆಟ್ ಮಂಡನೆ ಮಾಡಲಿದ್ದಾರೆ. ಸಿಎಂ ಅವರ ಕಾರ್ಯಕಲಾಪಗಳಪಟ್ಟಿಯಲ್ಲಿ ಬೆಳಗ್ಗೆ 10:15ಕ್ಕೆ ಬಜೆಟ್‌ ಮಂಡನೆ ಎಂದು ಉಲ್ಲೇಖವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!