ವರ್ಷದಲ್ಲಿ 13 ಗಂಟೆ ಮಾತ್ರ ದರ್ಶನ ನೀಡುವ ಈ ಗ್ರಾಮದೇವತೆ

ಹೊಸದಿಗಂತ ವರದಿ ಹಾವೇರಿ:

ವರ್ಷದಲ್ಲಿ ಒಂದು ದಿನ ಮಾತ್ರ ದರ್ಶನ ನೀಡುವ ಜಿಲ್ಲೆಯ ಹಾವನೂರ ದ್ಯಾಮವ್ವ ದೇವಿಯ ಜಾತ್ರಾಮಹೋತ್ಸವ ಇಂದು ಮತ್ತು ನಾಳೆ ನಡೆಯಲಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ದೇವಿ ದರ್ಶನ ಪಡೆದು ಪುನೀತರಾಗುವ ವೈಶಿಷ್ಟ್ಯ ಪೂರ್ಣ ಜಾತ್ರೆ ಇದಾಗಿದೆ.

ಜಾತ್ರೆಯ ಹಿಂದಿನ ದಿನ ರಾತ್ರಿ ದೇವಿಯನ್ನು ಪೆಟ್ಟಿಗೆಯಿಂದ ಹೊರ ತೆಗೆದು ಸರ್ವಾಲಂಕಾರದಿಂದ ಶೃಂಗರಿಸಿ ದೇವಸ್ಥಾನದಿಂದ ಚೌತ ಮನೆ ಕಟ್ಟಿಯವರಗೆ ಸಕಲ ವಾದ್ಯ ಮೇಳಗಳೊಂದಿಗೆ ತಮಷಾ ಮದ್ದಿನ ಬೆಳಕಿನ ಚಿತ್ತಾರದೊಂದಿಗೆ ದೇವಿಯ ಉತ್ಸವ ನಡೆಯುತ್ತದೆ.

ನಂತರ ಬೆಳಗಿನ ಜಾವ 4 ಗಂಟೆಗೆ ಚೌತ ಮನೆಯ ಕಟ್ಟೆಯಲ್ಲಿ ಪ್ರತಿಷ್ಠಾಪಿತಳಾಗುವ ದೇವಿಗೆ ಭಕ್ತರು ಉಡಿ ತುಂಬುವುದು, ಹಣ್ಣು ಕಾಯಿ ನೈವೇದ್ಯ ಹರಕೆ ತಿರಿಸಿಕೊಳ್ಳುವುರು. ವರ್ಷಪೂರ್ತಿ ಗುಪ್ತಪೂಜೆ ನೇರವೇರಿಸಿಕೊಳ್ಳುವ ದೇವಿಯು ಅಂದು 13 ಗಂಟೆಗಳ ಕಾಲ ಮಾತ್ರ ಭಕ್ತರಿಗೆ ದರ್ಶನ ನೀಡುವುದು ವೈಶಿಷ್ಟ್ಯವಾದ ಸಂಗತಿ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!