ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ನಮ್ಮ ರಾಜ್ಯಕ್ಕೆ ಈ ಬಜೆಟ್ ಮೇಲೆ ಭಾರೀ ನಿರೀಕ್ಷೆ ಇದೆ. ಈ ಬಗ್ಗೆ ಅಶ್ವತ್ಥ ನಾರಾಯಣ ಮಾತನಾಡಿದ್ದು, ದೇಶದಲ್ಲಿ ಉತ್ತಮ ಆರ್ಥಿಕ ಬೆಳವಣಿಗೆ ಇದೆ. ದೇಶದ ಆರ್ಥಿಕ ವ್ಯವಸ್ಥೆಯೂ ಉತ್ತಮವಾಗಿದೆ. ಕರ್ನಾಟಕಕ್ಕೆ ಅಭಿವೃದ್ಧಿಗೂ ಕೇಂದ್ರ ಸಿದ್ದವಿದೆ. ಆದರೆ ಕರ್ನಾಟಕ ಸರ್ಕಾರ ಇದಕ್ಕೆ ತಯಾರಿದ್ಯಾ? ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಕೆಲವು ಯೋಜನೆಗಳನ್ನ ಜಾರಿಗೆ ತರಲು ವಿಫಲವಾಗಿದೆ. ಆರೋಗ್ಯ ಇಲಾಖೆ, ನರೇಗದಲ್ಲಿ ನೀಡಲಾಗಿದ್ದ ಹಣ ವಾಪಸ್ಸುವಾಗಿದೆ. ರಾಜ್ಯ ಸರ್ಕಾರದಲ್ಲಿ ಹಣ ಇಚ್ಚಾಶಕ್ತಿ ಇಲ್ಲ ಎಂದರು.