ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮಾಜವನ್ನು ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ವಿಭಜಿಸುವವರು ‘ರಾವಣ’ ಮತ್ತು ‘ದುರ್ಯೋಧನ’ರಂತೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ.
ಗೋರಖ್‌ಪುರದ ವಂಟಂಗಿಯ ಗ್ರಾಮದ ಅರಣ್ಯವಾಸಿಗಳೊಂದಿಗೆ ದೀಪಾವಳಿ ಆಚರಿಸಿದ ಬಳಿಕ ಮಾತನಾಡಿದ ಅವರು, ಕೆಲವರು ಸಮಾಜದಲ್ಲಿ ಜಾತಿಯ ಆಧಾರದ ಮೇಲೆ ದ್ವೇಷವನ್ನು ಬಿತ್ತುತ್ತಾರೆ.ಧರ್ಮದ ಹೆಸರಿನಲ್ಲಿ ಸಮಾಜ ವಿಭಜನೆಗೆ ಯತ್ನಿಸುತ್ತಾರೆ. ಇಂತಹ ಮನಸ್ಥಿತಿ ಇರುವ ವ್ಯಕ್ತಿಗಳು ರಾಮಾಯಣದ ‘ರಾವಣ’ ಹಾಗೂ ಮಹಾಭಾರತದ ‘ದುರ್ಯೋಧ’ನಂತೆ ಎಂದು ಹೇಳಿದರು.
ಸಮಾಜದಲ್ಲಿ ಶಾಂತಿ ಕದಡುವ ಹಾಗೂ ಮಹಿಳೆಯ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು. ಸಮಾಜದ ವಿಭಜಕ ಶಕ್ತಿಗಳ ವಿರುದ್ಧ ಒಗ್ಗಟ್ಟಿನಿಂದ ಇರುವಂತೆ ಆದಿತ್ಯನಾಥ್ ಮನವಿ ಮಾಡಿದ್ದಾರೆ.