ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು,ನಿನ್ನೆಯ ಮಳೆಗೆ ಬೆಂಗಳೂರು ಮುಳುಗಡೆ ಆಗಿರುವಾಗಲೇ ಮತ್ತೆ ಇಂದೂ ಕೂಡ ಮಳೆ ಆರಂಭವಾಗಿದೆ.
ನಗರದ ವಸಂತ ನಗರ, ವಿಧಾನ ಸೌಧ, ಶಿವಾಜಿನಗರ, ರಾಜಭವನ ಸೇರಿದಂತೆ ಹಲವೆಡೆ ಇಂದು ಮಳೆಯಾಗಿದೆ. ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ಬಿಟಿಎಂ ಲೇಔಟ್, ಚಿಕ್ಕಪೇಟೆ, ಟೌನ್ಹಾಲ್, ರಾಜಭವನ, ಕಬ್ಬನ್ಪಾರ್ಕ್ ಸೇರಿ ಹಲವು ರಸ್ತೆಗಳಲ್ಲಿ ವಾಹನ ಸವಾರರ ಪರದಾಟ ಕಂಡು ಬಂದಿದೆ.
ಈ ವಿಚಾರವಾಗಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಟ್ವೀಟ್ ಮಾಡಿದ್ದಾರೆ. ಈ ಸಂಬಂಧ ಡಿಕೆ ಶಿವಕುಮಾರ್ ಅವರು ಎಚ್ ಡಿ ಕುಮಾರಸ್ವಾಮಿ ಹಾಗೂ ಆರ್ ಅಶೋಕ್ ಸೇರಿದಂತೆ ಯಾರಾದರೂ ಬೆಂಗಳೂರು ಮಳೆ ಅವಾಂತರ ಕುರಿತಂತೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಗೆ ಭೇಟಿ ನೀಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಕುರಿತು ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿರುವ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದು, ಎಚ್ ಡಿ ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಕುಮಾರಸ್ವಾಮಿ ಸೇರಿ ಬಿಜೆಪಿಗರು ಕೂಡ ನಮ್ಮನ್ನು ಹಾಗೂ ನಮ್ಮ ಸರ್ಕಾರ ನೋಡಿ ಹತಾಶರಾಗಿದ್ದಾರೆ ಎಂದರು.
ಎಚ್ ಡಿ ಕುಮಾರಸ್ವಾಮಿ ವಿಪಕ್ಷ ನಾಯಕ ಆರ್ ಅಶೋಕ್ ಸೇರಿ ಯಾರನ್ನಾದರೂ ಕರೆಯಿರಿ ಚರ್ಚಿಸೋಣ. ಚಾಲೆಂಜ್ ಮಾಡುತ್ತೇನೆ ಬನ್ನಿ ಡಿಬೇಟ್ ಮಾಡೋಣ ಎಂದು ಡಿಸಿಎಂ ಡಿಕೆ ಶಿವಕ ಬಿಜೆಪಿಯವರನ್ನು ಚರ್ಚೆಗೆ ಆಹ್ವಾನಿಸಿದರು.