ಜೂನ್ ತಿಂಗಳಲ್ಲಿ ರಾಜ್ಯದಲ್ಲಿ ಸಾವಿರ ವಿದ್ಯುತ್ ಚಾರ್ಜಿಂಗ್ ಕೇಂದ್ರ ಸ್ಥಾಪನೆ: ಸಚಿವ ವಿ. ಸುನೀಲ್ ಕುಮಾರ್

ಹೊಸದಿಗಂತ ವರದಿ, ಮೈಸೂರು:

ಬರುವ ಜೂನ್ ತಿಂಗಳಲ್ಲಿ ಇಡೀ ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರ ಸ್ಥಾಪನೆಯ ಬಗ್ಗೆ ಅಭಿಯಾನ ನಡೆಸಿ, ಆ ತಿಂಗಳ ಅಂತ್ಯದೊಳಗೆ ಕರ್ನಾಟಕದಲ್ಲಿ ಸಾವಿರ ವಿದ್ಯುತ್ ಚಾರ್ಜಿಂಗ್ ಸೆಂಟರ್ ಆರಂಭ ಮಾಡಲಿದ್ದೇವೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ತಿಳಿಸಿದರು.
ಶನಿವಾರ ಮೈಸೂರು ತಾಲೂಕಿನ ಕಡಕೋಳ ಗ್ರಾಮದಲ್ಲಿರುವ ಕೆಇಬಿಇಎ ತರಬೇತಿ ಕೇಂದ್ರದಲ್ಲಿ ಸೆಸ್ಕಾಂವತಿಯಿAದ ಆಯೋಜಿಸಲಾಗಿದ್ದ ವಿದ್ಯುತ್ ಚಾಲಿತ ವಾಹನಗಳು ಮತ್ತು ಅದರ ಚಾರ್ಜಿಂಗ್ ತಂತ್ರಜ್ಞಾನಗಳ ಕುರಿತು ವಿಚಾರ ಸಂಕೀರ್ಣ ಹಾಗೂ ನೂತನವಾಗಿ ನಿರ್ಮಿಸಲಾಗಿರುವ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಅವರು,
ವಾಯುಮಾಲಿನ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲೆಕ್ಷಿçಕ್ ವಾಹನಗಳಿಗೆ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.
ಎಲೆಕ್ಟಿಕಲ್ ವಾಹನಗಳ ಚಾರ್ಜಿಂಗ್ ಸ್ಟೆಷನ್ ಆರಂಭಿಸಲು ಸರ್ಕಾರದಿಂದ ಸಬ್ಸಿಡಿ ನೀಡಲಾಗುವುದು.
ಕೇಂದ್ರ ಸರ್ಕಾರವು ಸಹ ಎಲೆಕ್ಟಿçಕ್ ವಾಹನಗಳ ಖರೀದಿಗೆ ಮೇಲೆ ಮಾತ್ರವಲ್ಲದೇ ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣದ ಮೇಲೂ ಆಕರ್ಷಕ ಸಬ್ಸಡಿಗಳನ್ನು ನೀಡುತ್ತಿದೆ.
ಈಗಾಗಲೇ ಹೆಚ್ಚು ಸ್ಟೇಷನ್ ನಿರ್ಮಾಣ ಮಾಡಲು ಸಭೆಗಳನ್ನು ಮಾಡಿದ್ದೇವೆ. ಎಲ್ಲಾ ಜಿಲ್ಲಾ ಕೇಂದ್ರ, ರಾಷ್ಟ್ರೀಯ , ರಾಜ್ಯ ಹೆದ್ದಾರಿ, ಪ್ರವಾಸಿ ತಾಣಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಮಾಡುವ ಬಗ್ಗೆ ನಿರ್ಧಾರ ಮಾಡಲಾಗಿದೆ,
ಸರ್ಕಾರಿ ಕಚೇರಿಗಳಲ್ಲಿ ಎಲೆಕ್ಟಿçಕ್ ವಾಹನ ಉಪಯೋಗ ಮಾಡುವ ಕುರಿತು ಚಿಂತಿಸಲಾಗಿದೆ . ರಾಜ್ಯದ ಎಲ್ಲ ಭಾಗಗಳಲ್ಲಿ ಕೂಡ ವಿದ್ಯುತ್ ಚಾರ್ಜಿಂಗ್ ಸೆಂಟರ್ಗಳನ್ನು ಪ್ರಾರಂಭ ಮಾಡಬೇಕು ಎಂಬ ಪೂರ್ವ ತಯಾರಿಯನ್ನು ದೊಡ್ಡಪ್ರಮಾಣದಲ್ಲಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಜಿ.ಟಿ ದೇವೇಗೌಡ, ಹರ್ಷವರ್ಧನ್, ಎಂ.ಎಲ್. ಸಿ ಮಂಜೇಗೌಡ, ಸೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ, ತಾಂತ್ರಿಕ ನಿರ್ದೇಶಕ ಸೋಮಶೇಖರ್, ಲೆಕ್ಕಾಧಿಕಾರಿ ಸಂಘದ ಅಧ್ಯಕ್ಷ ಮಂಜಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!