ಬೆದರಿಕೆ ಹಿನ್ನೆಲೆ: ಸಲ್ಮಾನ್ ಖಾನ್ ಗೆ Y+, ಅಕ್ಷಯ್ ಕುಮಾರ್, ಅನುಪಮ್ ಖೇರ್ ಗೆ ʼX’ ಕೆಟಗರಿ ಭದ್ರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪಂಜಾಭಿ ಗಾಯಕ ಸಿಧು ಮೂಸೇವಾಲಾ ಹತ್ಯೆಗೆ ಕಾರಣವಾಗಿದ್ದ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ನಿಂದ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರಿಗೆ ಮಹಾರಾಷ್ಟ್ರ ಸರ್ಕಾರವು Y+ ಭದ್ರತೆಯನ್ನು ನೀಡಿದೆ. ಪ್ರಸ್ತುತ ಬೆದರಿಕೆಗಳಿರುವ ಹಿನ್ನೆಲೆಯಲ್ಲಿ ನಟರಾದ ಅಕ್ಷಯ್ ಕುಮಾರ್ ಮತ್ತು ಅನುಪಮ್ ಖೇರ್ ಅವರಿಗೂ ʼX’ ಕೆಟಗರಿ ಭದ್ರತೆಯನ್ನು ನೀಡಲಾಗಿದೆ.

ಇಲ್ಲಿಯವರೆಗೂ ಮುಂಬೈ ಪೊಲೀಸರಿಂದ ಸಲ್ಮಾನ್‌ಗೆ ನಿಯಮಿತ ಪೊಲೀಸ್ ರಕ್ಷಣೆ ನೀಡಲಾಗಿತ್ತು. ಆದಾಗ್ಯೂ, ಈಗ ಮಿಡ್-ಡೇ ವರದಿಯ ಪ್ರಕಾರ, ನಟನಿಗೆ Y+ ಭದ್ರತೆಯನ್ನು ನೀಡಲಾಗುತ್ತಿದೆ. ಇದರನ್ವಯ ಎಲ್ಲಾ ಸಮಯದಲ್ಲೂ ಅವರಿಗೆ ನಾಲ್ಕು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿ ನೀಡಲಾಗುತ್ತದೆ. ಅದೇ ರೀತಿ, ಅಕ್ಷಯ್ ಕುಮಾರ್‌ಗೆ ಈಗ ಎಕ್ಸ್-ಕೆಟಗರಿ ಭದ್ರತೆಯನ್ನು ನೀಡಲಾಗುತ್ತಿದೆ, ಅಂದರೆ ಅವರನ್ನು ರಕ್ಷಿಸಲು ಪಾಳಿಯಲ್ಲಿ ಮೂವರು ಭದ್ರತಾ ಸಿಬ್ಬಂದಿಗಳಿರುತ್ತಾರೆ ಅನುಪಮ್ ಖೇರ್ ಅವರಿಗೂ ಅದೇ ಮಟ್ಟದ ಭದ್ರತೆ ನೀಡಲಾಗಿದೆ. ರಕ್ಷಣೆಯ ವೆಚ್ಚವನ್ನು ಸೆಲೆಬ್ರಿಟಿಗಳು ಭರಿಸಲಿದ್ದಾರೆ ಎಂದು ವರದಿ ಹೇಳಿದೆ.

ಮುಂಬೈ, ಪಂಜಾಬ್ ಮತ್ತು ದೆಹಲಿಯಲ್ಲಿ ನಡೆಸಿದ ತನಿಖೆಗಳು ಕಳೆದ ಕೆಲವು ತಿಂಗಳುಗಳಲ್ಲಿ ದರೋಡೆಕೋರರಾದ ​​ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಅವರು ಸಲ್ಮಾನ್ ಖಾನ್ ಅವರನ್ನು ಮುಂಬೈನಲ್ಲಿ ಕೊಲ್ಲಲು ಯೋಜಿಸಿದ್ದರು ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ ದರೋಡೆಕೋರರು 2017 ರಲ್ಲಿ ಅವರ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಅವರ ಬಾಂದ್ರಾ ಮನೆಯ ಹೊರಗೆ ಒಮ್ಮೆ ಮತ್ತು 2018 ರಲ್ಲಿ ಅವರ ಪನ್ವೇಲ್ ಫಾರ್ಮ್‌ಹೌಸ್‌ನಲ್ಲಿ ಒಮ್ಮೆ ದರೋಡೆಕೋರರು ಎರಡು ಬಾರಿ ಪ್ರಯತ್ನಿಸಿದ್ದಾರೆ ಎಂದು ವರದಿಗಳು ಸೂಚಿಸಿವೆ. ಅನುಪಮ್ ಅವರ ಚಲನಚಿತ್ರ ದಿ ಕಾಶ್ಮೀರ್ ಫೈಲ್ಸ್ ಬಿಡುಗಡೆಯಾದ ನಂತರ ಅವರಿಗೆ ಬೆದರಿಕೆಗಳು ಹೆಚ್ಚಿದ್ದು ಅವರಿಗೆ ಉನ್ನತ ಭದ್ರತೆಯನ್ನು ನೀಡಲಾಗಿದೆ ಎಂದು ವರದಿ ಹೇಳಿದೆ. ಅಲ್ಲದೇ ಅಕ್ಷಯ್‌ ಕುಮಾರ್‌ ಅವರಿಗೆ ಸಾಮಾಜಿಕ ಮಾಧ್ಯಮಗಳಿಂದ ಬೆದರಿಕೆಗಳಿವೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!