ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಮ್ಮ ರಾಮಮಂದಿರ ಸ್ಫೋಟಿಸುತ್ತೇವೆ, ಸುಧಾರಿಸಿಕೊಳ್ಳಿ ಎನ್ನುವ ಬೆದರಿಕೆಯ ಪತ್ರವೊಂದು ಪತ್ತೆಯಾಗಿದೆ.
ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಆನಂದ ಸೋಲಾಪೊರೆ ನೀಡಿರುವ ಮಾಹಿತಿ ಅನ್ವಯ, ಅಲ್ಲಾ ಹು ಅಕ್ಬರ್ ಹೆಸರಿನಲ್ಲಿ ಬೆದರಿಕೆ ಪತ್ರ ಬಂದಿದೆ.
ದೊಡ್ಡ ಪ್ರಮಾಣದ ಸ್ಫೋಟ ಆಗಲಿದೆ, ಇದೇ ತಿಂಗಳ ೨೦.೨೨ರಂದು ಸ್ಫೋಟಿಸುತ್ತೇವೆ ಎನ್ನುವ ಪತ್ರ ಮಂದಿರದ ಬಾಗಿಲಿನಲ್ಲಿ ಸಿಕ್ಕಿದೆ.
ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ನಿಪ್ಪಾಣಿ ಪಟ್ಟಣದ ಶ್ರೀ ರಾಮ ಮಂದಿರದ ಆಡಳಿತ ಮಂಡಳಿ ನಿಪ್ಪಾಣಿ ಶಹರ ಠಾಣೆಯಲ್ಲಿ ದೂರು ನೀಡಿದೆ.
ಬೆದರಿಕೆ ಪತ್ರ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದು, ಮಂದಿರದ ಆವರಣದೊಳಗೆ 14 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಈ ದೇಗುಲಕ್ಕೆ ಬೆದರಿಕೆ ಪತ್ರ ಬಂದಿರುವುದು ಇದು ಎರಡನೇ ಬಾರಿ.