ಸಲ್ಮಾನ್ ಖಾನ್​ಗೆ ಜೀವ ಬೆದರಿಕೆ: ರಾಜಸ್ಥಾನದಲ್ಲಿ ವ್ಯಕ್ತಿ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಲ್ಮಾನ್ ಖಾನ್​ಗೆ (Salman Khan) ಕೆಲವು ದಿನಗಳ ಹಿಂದೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಸಲ್ಮಾನ್ ಖಾನ್​ಗೆ (Salman Khan) ಕೆಲವು ದಿನಗಳ ಹಿಂದೆಯಷ್ಟೆ ವ್ಯಕ್ತಿಯೊಬ್ಬ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಕಳಿಸಿದ್ದ. ಸಲ್ಮಾನ್ ಖಾನ್​ರ ಆಪ್ತ ಹಾಗೂ ಮ್ಯಾನೇಜರ್ ಸಹ ಆಗಿರುವ ಪ್ರಶಾಂತ್ ಗುಂಜಲ್ಕರ್​ಗೆ ಈ ಬೆದರಿಕೆ ಇ-ಮೇಲ್ ಬಂದಿದ್ದು, ಈ ಕುರಿತು ಪ್ರಶಾಂತ್ ಮಾರ್ಚ್ 18 ರಂದು ಮುಂಬೈ ಪೊಲೀಸರ ಬಳಿ ದೂರು ದಾಖಲಿಸಿದ್ದರು.

ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು ರಾಜಸ್ಥಾನದ ಜೋಧಪುರದಿಂದ ಇಮೇಲ್ ಬಂದಿದ್ದು ತಿಳಿದು ರಾಜಸ್ಥಾನಕ್ಕೆ ತೆರಳಿ ಅಲ್ಲಿನ ಸ್ಥಳೀಯ ಪೊಲೀಸರ ನೆರವಿನೊಂದಿಗೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

21 ವರ್ಷದ ಧಕದ್​ರಾಮ್ ಬಿಷ್ಣೋಯಿ ಎಂಬಾತನನ್ನು ಮುಂಬೈ ಪೊಲೀಸರುಗ ಬಂಧಿಸಿದ್ದು, ಇದೇ ವ್ಯಕ್ತಿಯೇ ಸಲ್ಮಾನ್ ಖಾನ್​ ಅನ್ನು ಕೊಲ್ಲುವುದಾಗಿ ಅವರ ಮ್ಯಾನೇಜರ್​ಗೆ ಇಮೇಲ್ ಕಳಿಸಿದ್ದ ಎನ್ನಲಾಗುತ್ತಿದೆ.

ಇದೇ ಆರೋಪಿಯು ಗಾಯಕ ಸಿಧು ಮೂಸೆವಾಲ ತಂದೆಗೂ ಇ-ಮೇಲ್ ಕಳಿಸಿದ್ದು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಸಹ ಜೋಧ್​ಪುರ ಪೊಲೀಸರಿಗೆ ಮಾಹಿತಿ ಹಂಚಿಕೊಂಡು ಆತನ ಬಂಧನಕ್ಕೆ ಯತ್ನಿಸಿದ್ದರು ಎಂದು ಜೋಧ್​ಪುರದ ಲೂನಿ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ.

ಬಂಧಿತನಾಗಿರುವ ಧಕದ್​ರಾಮ್ ಬಿಷ್ಣೋಯಿ ಬಳಿ ಶಸ್ತ್ರಾಸ್ತ್ರಗಳು ಸಹ ಪತ್ತೆಯಾಗಿದ್ದು, ಕೊಲೆ ಬೆದರಿಕೆ ಜೊತೆಗೆ ಅಕ್ರಮ ಶಸ್ತ್ರಾಸ್ತ್ರ ಪ್ರಕರಣವನ್ನು ಸಹ ಆತನ ಮೇಲೆ ದಾಖಲಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!