Thursday, January 29, 2026
Thursday, January 29, 2026
spot_img

ಶಿಡ್ಲಘಟ್ಟ ಕೆಎಎಸ್ ಅಧಿಕಾರಿಗೆ ಬೆದರಿಕೆ: ಮಂಗಳೂರಿನಲ್ಲಿ ಆರೋಪಿ ರಾಜೀವ್‌ ಗೌಡ ಸ್ಥಳ ಮಹಜರು

ಹೊಸದಿಗಂತ ವರದಿ, ಮಂಗಳೂರು:

ಕೆಎಎಸ್ ಅಧಿಕಾರಿ ಅಮೃತಾಗೌಡಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ಕಾಂಗ್ರೆಸ್ ನಾಯಕ ರಾಜೀವ್ ಗೌಡನನ್ನು ಮಂಗಳೂರಿಗೆ ಸ್ಥಳ ಮಹಜರಿಗೆ ಪೊಲೀಸರು ಗುರುವಾರ ಕರೆತಂದಿದ್ದಾರೆ.

ಶಿಡ್ಲಘಟ್ಟದಿಂದ ತಲೆಮರೆಸಿಕೊಂಡು ಮಂಗಳೂರಿನ ಪಚ್ಚನಾಡಿಯಲ್ಲಿ ಮೈಕಲ್ ಎಂಬಾತನಿಗೆ ಸೇರಿದ ಜಾಕ್ ಡಿಸೈನ್ ಫಾರ್ಮ್ ಹೌಸ್‌ನಲ್ಲಿ ರಾಜೀವ್ ಗೌಡ ಆಶ್ರಯ ಪಡೆದಿದ್ದ, ಮೈಕಲ್ ಕೂಡಾ ಜೊತೆಗಿದ್ದ. ಈ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ವೃತ್ತ ನಿರೀಕ್ಷಕ ಆನಂದ್ ಕುಮಾರ್ ನೇತೃತ್ವದಲ್ಲಿ ರಾಜೀವ್ ಗೌಡನನ್ನು ಮಂಗಳೂರಿಗೆ ಕರೆ ತರಲಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !