ಪ್ರತಿಷ್ಠಿತ ಬ್ರ್ಯಾಂಡೆಡ್ ಬಟ್ಟೆಗಳ ನಕಲಿ ಮಾಡಿ ಮಾರಾಟ ಮಾಡ್ತಿದ್ದ ಮೂವರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಗರದಲ್ಲಿ ನಕಲಿಕೋರರ ಮೇಲಿನ ದಾಳಿ ಮುಂದುವರೆದಿದೆ. ಪ್ರತಿಷ್ಠಿತ ಬ್ರ್ಯಾಂಡ್‌ಗಳ ಲೇಬಲ್ ಬಳಕೆ ಮಾಡಿ ನಕಲಿ ಸಿದ್ಧ ಉಡುಪು ತಯಾರಿಕೆ ಮಾಡುತ್ತಿದ್ದ ಘಟಕದ ಮೇಲೆ ಮಾದನಾಯಕನಹಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಪತ್ತೆಯಾದ ಸುಮಾರು 40 ಲಕ್ಷ ರೂ. ಮೌಲ್ಯದ ನಕಲಿ ಬ್ರ್ಯಾಂಡೆಡ್ ಬಟ್ಟೆಗಳನ್ನು ವಶಪಡಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ಬಗ್ಗೆ ಬ್ರ್ಯಾಂಡ್ ಕಂಪನಿಯ ರಾಯಭಾರಿ ಸಂಸ್ಥೆಯಾಗಿರುವ ಅನ್ವೇಶ್ ಐಪಿಆರ್ ಸಂಸ್ಥೆ ಮಾಹಿತಿ ಕಲೆಹಾಕಿ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿತ್ತು. ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ತೋಟದ ಗುಡ್ಡದಹಳ್ಳಿಯಲ್ಲಿ ಆಶ್ರಫ್, ಶರ್ಪುದ್ದೀನ್ ಮತ್ತು ಸರವಣ ಎಂಬುವವರು ಈ ನಕಲಿ ಗಾರ್ಮೆಂಟ್ ಫ್ಯಾಕ್ಟರಿ ನಡೆಸುತ್ತಿದ್ದರು.

ಈ ನಕಲಿ ಬ್ರ್ಯಾಂಡ್​ನ ಗಾರ್ಮೆಂಟ್​ಗಳನ್ನು ಅಸಲಿ ಬ್ರಾಂಡ್‌ಗಳೆಂದು ಬಿಂಬಿಸಿ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!