ಹೊಸದಿಗಂತ ಡಿಜಿಟಲ್ ಡೆಸ್ಕ್:
ನಕಲಿ ಆಧಾರ್ ಕಾರ್ಡ್ ತೋರಿಸಿ ಸಂಸತ್ ಭವನ ಪ್ರವೇಶಿಸಲು ಮುಂದಾದ ಮೂವರನ್ನು ಸಿಐಎಸ್ಎಫ್ ವಶಕ್ಕೆ ಪಡೆದಿದೆ.
ಕಾಸಿಂ, ಮೋನಿಸ್ ಮತ್ತು ಶೋಯೆಬ್ ಎಂದು ಗುರುತಿಸಲಾದ ಮೂವರು ವ್ಯಕ್ತಿಗಳು ಕಾರ್ಮಿಕರಂತೆ ನಟಿಸಿ ಗೇಟ್ ಸಂಖ್ಯೆ 3 ರಿಂದ ಸಂಸತ್ ಭವನದ ಒಳ ಪ್ರವೇಶಿಸಲು ಪ್ರಯತ್ನಿಸಿದ್ದಾರೆ.
ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 19/465/468/471/120B ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಎಫ್ಐಆರ್ ಪ್ರಕಾರ, ಜೂನ್ 4ರಂದು ಮಧ್ಯಾಹ್ನ 1.30ಕ್ಕೆ ಘಟನೆ ನಡೆದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.