ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪರಿಚಿತ ದುಷ್ಕರ್ಮಿಗಳು ಶಾಲೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದರಿಂದ ಮೂವರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿರುವ ಘಟನೆ ಮಿಸೌರಿಯ ಸೇಂಟ್ ಲೂಯಿಸ್‌ನಲ್ಲಿ ನಡೆದಿದೆ. ಬಂದೂಕುಧಾರಿಯೊಬ್ಬ ಸೆಂಟ್ರಲ್ ವಿಷುಯಲ್ ಮತ್ತು ಪರ್ಫಾರ್ಮಿಂಗ್ ಆರ್ಟ್ಸ್ ಹೈಸ್ಕೂಲ್ ಪ್ರವೇಶಿ ದುಷ್ಕೃತ್ಯ ಎಸಗಿದ್ದಾನೆ.
ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ಶಾಲೆಯಲ್ಲಿ 400 ವಿದ್ಯಾರ್ಥಿಗಳು ಇದ್ದು, ಸ್ಥಳದಲ್ಲಿಯೇ ಓರ್ವ ಬಾಲಕಿ ಸಾವನ್ನಪ್ಪಿದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮತ್ತೊಬ್ಬ ವಿದ್ಯಾರ್ಥಿ ಅಸುನೀಗಿದ್ದಾರೆ. ಏಳು ಮಂದಿ ಗಾಯಗೊಂಡವರಲ್ಲಿ ಮೂವರು ಹೆಣ್ಣುಮಕ್ಕಳು ಮತ್ತು ನಾಲ್ವರು ಹುಡುಗರು ಸೇರಿದ್ದಾರೆ. ಗುಂಡಿನ ದಾಳಿ ವಿಷಯ ಕೇಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರೋಪಿಯ ಹುಟ್ಟಡಗಿಸಿದ್ದಾರೆ.
ಪೊಲೀಸರನ್ನು ಕಂಡು ಓಡಿ ಹೋಗುತ್ತಿದ್ದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಆರೋಪಿ ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾನೆ. ಆದರೆ, ಆ ಆರೋಪಿಯನ್ನು 19 ವರ್ಷದ ಹಳೆ ವಿದ್ಯಾರ್ಥಿ ಎಂದು ಪೊಲೀಸರು ಗುರುತಿಸಿದ್ದಾರೆ. ನಗರ ಪೊಲೀಸ್ ಕಮಿಷನರ್ ಮೈಕೆಲ್ ಸಾಕ್ ಪ್ರಕಾರ, ದಾಳಿಕೋರನ ಬಳಿ ಲಾಂಗ್ ಗನ್ ಇತ್ತು. ಪೊಲೀಸರನ್ನು ನೋಡಿದ ದುಷ್ಕರ್ಮಿ ಪರಾರಿಯಾಗಿದ್ದಾನೆ. ಆ ಶೂಟರ್ ಕಳೆದ ವರ್ಷ ಇದೇ ಶಾಲೆಯಲ್ಲಿ ಪದವಿ ಪಡೆದಿದ್ದು, ಯಾವುದೇ ಅಪರಾಧ ವರ್ತನೆಯ ಇತಿಹಾಸವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.