ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್‌ನಲ್ಲಿ ಭಾರತದ 3 ಯುವಕರನ್ನು ಕಿಡಿಗೇಡಿಗಳು ಅಪಹರಿಸಿದ್ದು, ಬಿಡುಗಡೆಗಾಗಿ 1 ಕೋಟಿ ರೂ. ಡಿಮ್ಯಾಂಡ್ ಮಾಡಿದ್ದಾರೆ.
ಅಪಹರಣಕ್ಕೊಳಗಾದವರನ್ನು ಪಂಜಾಬ್ ಮೂಲದ ಹುಶನ್‌ಪ್ರೀತ್ ಸಿಂಗ್, ಜಸ್ಪಾಲ್ ಸಿಂಗ್ ಮತ್ತು ಅಮೃತ್‌ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ.
ಇರಾನ್‌ಗೆ ಪ್ರಯಾಣಿಸಿದ ನಂತರ ಯುವಕರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಭಾರತೀಯ ರಾಯಭಾರ ಕಚೇರಿಗೆ ಮಾಹಿತಿಗೆ ನೀಡಲಾಗಿತ್ತು. ಈ ವಿಷಯವನ್ನು ಇರಾನಿನ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿತ್ತು. ಯುವಕರನ್ನು ತುರ್ತಾಗಿ ಪತ್ತೆಹಚ್ಚಬೇಕು ಅವರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ರಾಯಭಾರ ಕಚೇರಿ ಮನವಿ ಮಾಡಿದೆ.