March 31, 2026
Tuesday, March 31, 2026
spot_img

ಮಂಜುವಿರಟ್ಟು ಸ್ಪರ್ಧೆಯಲ್ಲಿ ಗೂಳಿಗಳು ತಿವಿದು ಮೂವರು ಸಾವು, 75 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳುನಾಡಿನಲ್ಲಿ ಮಾಸಿ ಮಾಗಂ ಹಬ್ಬದ ಪ್ರಯುಕ್ತ ನಡೆದ ಮಂಜುವಿರಟ್ಟು ಸ್ಪರ್ಧೆಯಲ್ಲಿ ಗೂಳಿಗಳು ತಿವಿದು ಮೂವರು ಮೃತಪಟ್ಟಿದ್ದಾರೆ.

ರಾಜಸ್ಥಾನದ ಐಸ್ ಕ್ರೀಮ್ ಮಾರಾಟಗಾರ ಜಮ್ಮುಲಾಲ್ ಲಾಲ್ಜಿ, ನಟ್ಟರ್ ಮಂಗಲಂನ ರಾಮನಾಥನ್ ಮತ್ತು ಪುದುಕ್ಕೊಟ್ಟೈನ ರಾಜೇಂದ್ರನ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗೂಳಿ ಬೆನ್ನಟ್ಟುವ ಸ್ಪರ್ಧೆಗೆ 600ಕ್ಕೂ ಹೆಚ್ಚು ಗೂಳಿಗಳನ್ನು ಬಿಡಲಾಗಿತ್ತು. ಈ ವೇಳೆ ಭಯಕ್ಕೆ ಜನರು ಹತ್ತಿರ ಹತ್ತಿರ ಬಂದು ಕಾಲ್ತುಳಿತದಂತಹ ಪರಿಸ್ಥಿತಿ ಉಂಟಾಗಿದೆ. ಈ ಘಟನೆಯಲ್ಲಿ ಪ್ರೇಕ್ಷಕರು ಮತ್ತು ಗೂಳಿಗಳನ್ನು ಪಳಗಿಸುವವರು ಸೇರಿದಂತೆ ಕನಿಷ್ಠ 75 ಜನರು ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ 8 ಜನರನ್ನು ವಿಶೇಷ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಗಳ ಗುರುತು ತಿಳಿದುಬಂದಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !