ಜರ್ಸಿ ದ್ವೀಪದಲ್ಲಿ ಸ್ಫೋಟ: ಮೂವರ ಸಾವು, 12ಕ್ಕೂ ಹೆಚ್ಚು ಮಂದಿ ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜರ್ಸಿ ದ್ವೀಪದಲ್ಲಿರುವ ಚಾನೆಲ್ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, 12ಮಂದಿ ಕಾಣೆಯಾಗಿದ್ದಾರೆ ಎಂದು ದ್ವೀಪದ ಮುಖ್ಯಮಂತ್ರಿ ಕ್ರಿಸ್ಟಿನಾ ಮೂರ್ ತಿಳಿಸಿದರು. ಘಟನೆಯ ಬಗ್ಗೆ ಸ್ಥಳೀಯ ಪೊಲೀಸರಿಗೆ ಮುಂಜಾನೆ 4 ಗಂಟೆಗೆ (ಸ್ಥಳೀಯ ಕಾಲಮಾನ) ಮಾಹಿತಿ ನೀಡಲಾಯಿತು.

ಘಟನೆಯ ಬಗ್ಗೆ ಪೊಲೀಸರಿಗೆ ಎಚ್ಚರಿಕೆ ನೀಡಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿದವು ಎಂದು ಸ್ಟೇಟ್ಸ್ ಆಫ್ ಜರ್ಸಿ ಪೊಲೀಸ್‌ನ ಮುಖ್ಯ ಅಧಿಕಾರಿ ರಾಬಿನ್ ಸ್ಮಿತ್ ಹೇಳಿದ್ದಾರೆ.  ಮೂರು ಅಂತಸ್ತಿನ ಕಟ್ಟಡವು ಸಂಪೂರ್ಣವಾಗಿ ಕುಸಿದಿದ್ದು, ಪರಿಸ್ಥಿತಿಯನ್ನು “ವಿನಾಶಕಾರಿ ದೃಶ್ಯ” ಎಂದು ವಿವರಿಸಿದರು. ಇದಲ್ಲದೆ, ಹಲವಾರು ಫ್ಲಾಟ್‌ಗಳಿಂದ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಾಬಿನ್ ಸ್ಮಿತ್ ಹೇಳಿದ್ದಾರೆ. 20 ರಿಂದ 30 ಜನರನ್ನು ಆಶ್ರಯಕ್ಕಾಗಿ ಸಮೀಪದ ಟೌನ್ ಹಾಲ್‌ಗೆ ಕರೆದೊಯ್ಯಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ತೆಯಾಗದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಗಮನಾರ್ಹವಾಗಿ ಜರ್ಸಿಯು ಫ್ರಾನ್ಸ್‌ನ ವಾಯುವ್ಯ ಕರಾವಳಿಯಲ್ಲಿರುವ ಒಂದು ದ್ವೀಪ ಪ್ರದೇಶವಾಗಿದೆ. ಘಟನೆಯ ಕಾರಣವನ್ನು ಕಂಡುಹಿಡಿಯಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. CNN ವರದಿಯ ಪ್ರಕಾರ, ಸ್ಫೋಟದ ಹಿಂದಿನ ರಾತ್ರಿ ನಿವಾಸಿಗಳು ಅನಿಲದ ವಾಸನೆಯ ಬಗ್ಗೆ ವರದಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!