March 29, 2026
Sunday, March 29, 2026
spot_img

ಥಾರ್ ಕಾರ್ಬಾರಿಗೆ ಮೂವರು ಬಲಿ: ಬೇಸಿಗೆ ರಜೆ ಕಳೆಯಲು ಅಜ್ಜನ ಮನೆಗೆ ಬಂದ ಮೊಮ್ಮಕ್ಕಳು ಸೇರಿದ್ದು ಮಸಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿಯಂತ್ರಣ ತಪ್ಪಿದ ಥಾರ್ ಕಾರೊಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮೂವರ ಮೇಲೆ ಹರಿದುಬಂದ ಪರಿಣಾಮ ಅಜ್ಜ ಹಾಗೂ ಇಬ್ಬರು ಮೊಮ್ಮಕ್ಕಳು ಪ್ರಾಣ ಕಳೆದುಕೊಂಡ ಘಟನೆ ಗುರ್ಗಾಂವ್ ಸಮೀಪದ ಪಟೌಡಿ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು 70 ವರ್ಷದ ಸುಭಾಷ್ ಮತ್ತು ಅವರ ಮೊಮ್ಮಕ್ಕಳಾದ 8 ವರ್ಷದ ಇಶಾಂತ್ ಹಾಗೂ 10 ವರ್ಷದ ಜೈದ್ ಎಂದು ಗುರುತಿಸಲಾಗಿದೆ.

ಘಟನೆ ರಾತ್ರಿ ವೇಳೆ ಸಂಭವಿಸಿದ್ದು, ಸುಭಾಷ್ ಅವರು ತಮ್ಮ ಮೊಮ್ಮಕ್ಕಳೊಂದಿಗೆ ಊಟದ ಬಳಿಕ ಸಣ್ಣ ವಾಕ್‌ಗೆ ಹೊರಟಿದ್ದರು. ಇದೇ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ:

ಡಿಕ್ಕಿಯ ತೀವ್ರತೆಗೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗುರ್ಗಾಂವ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೂವರೂ ಸಾವನ್ನಪ್ಪಿದ್ದಾರೆ.

ಅಪಘಾತದ ಬಳಿಕ ಕಾರು ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದನು. ಆದರೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ 25 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆಯೇ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ.

ಬೇಸಿಗೆ ರಜೆಗೆ ಅಜ್ಜನ ಮನೆಗೆ ಬಂದಿದ್ದ ಮಕ್ಕಳು ದುರಂತಕ್ಕೆ ಬಲಿಯಾದ ಘಟನೆ ಸ್ಥಳೀಯರನ್ನು ಕಂಬನಿ ಮಿಡಿಯುವಂತೆ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !