April 25, 2026
Saturday, April 25, 2026
spot_img

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಳ್ಳರ ಕೈಚಳಕ: 15ಕ್ಕೂ ಹೆಚ್ಚು ಫೋನ್ ಎಗರಿಸಿದ ಖದೀಮರು, ಫ್ಯಾನ್ಸ್ ಶಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಮೊದಲ ಪಂದ್ಯ ಯಶಸ್ವಿಯಾಗಿ ನಡೆದ ಸಂತಸದ ನಡುವೆ, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳ್ಳರ ಹಾವಳಿ ಆತಂಕ ಮೂಡಿಸಿದೆ. ಪಂದ್ಯ ಮುಗಿದ ಬಳಿಕ ಹೊರಬರುತ್ತಿದ್ದ ಅಭಿಮಾನಿಗಳ ಜನಸಂದಣಿಯನ್ನು ಸದುಪಯೋಗಪಡಿಸಿಕೊಂಡು ಕಳ್ಳರು ಮೊಬೈಲ್‌ಗಳನ್ನು ಕಳವು ಮಾಡಿದ್ದಾರೆ.

ಮಾಹಿತಿ ಪ್ರಕಾರ, 15ಕ್ಕೂ ಹೆಚ್ಚು ಮೊಬೈಲ್ ಕಳವು ಪ್ರಕರಣಗಳು ದಾಖಲಾಗಿವೆ. ಕೆಲವು ಅಭಿಮಾನಿಗಳು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರೆ, ಇನ್ನೂ ಕೆಲವರು ಆನ್‌ಲೈನ್ ಮೂಲಕ ದೂರು ಸಲ್ಲಿಸಿದ್ದಾರೆ. ವಿಶೇಷವಾಗಿ ಗೇಟ್ ಸಂಖ್ಯೆ 3 ಬಳಿ ಹೆಚ್ಚು ಕಳವು ಪ್ರಕರಣಗಳು ನಡೆದಿರುವುದು ತಿಳಿದುಬಂದಿದೆ. ಜನಸಂದಣಿ ಹೆಚ್ಚಿದ್ದ ಸಂದರ್ಭದಲ್ಲಿ ಪಿಕ್‌ಪಾಕೆಟ್ ಗ್ಯಾಂಗ್ ಸಕ್ರಿಯವಾಗಿದ್ದರೆಂದು ಶಂಕಿಸಲಾಗಿದೆ.

ಇದನ್ನೂ ಓದಿ:

ಈ ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಪಿಗಳನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ, ಕ್ರೀಡಾ ಸಂಭ್ರಮದ ನಡುವೆ ಈ ಕಳ್ಳತನ ಘಟನೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದು, ಭವಿಷ್ಯದಲ್ಲಿ ಭದ್ರತೆ ಮತ್ತಷ್ಟು ಬಲಪಡಿಸುವ ಅಗತ್ಯತೆ ಎದುರಾಗಿದೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !