ದಿಗಂತ ವರದಿ ಗಂಗಾವತಿ:
ಗಂಗಾವತಿ ತಾಲೂಕಿನ ಹೊರವಲಯದಲ್ಲಿ ರೈಲು ಹರಿದು ಮೂವರು ಯುವಕರು ಮೃತಪಟ್ಟಿದ್ದಾರೆ.
ಗಂಗಾವತಿಯ ಮೌನೇಶ್(23), ಸುನೀಲ್(23), ವೆಂಕಟಭೀಮಾನಾಯ್ಕ (20) ಮೃತ ದುರ್ದೈವಿಗಳು.
ಕುಡಿದ ಮತ್ತಿನಲ್ಲಿ ರೈಲು ಹಳಿ ಮೇಲೆ ಯುವಕರು ಮಲಗಿದ್ದಾಗ ಹುಬ್ಬಳ್ಳಿ ಯಿಂದ ಸಿಂಧನೂರಿಗೆ ಹೊರಟ್ಟಿದ್ದ ರೈಲು ಹರಿದಿದೆ. ಗುರುವಾರ ರಾತ್ರಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.