ಶೌಚ ಗುಂಡಿ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಒಂದೇ ಕುಟುಂಬದ ಮೂವರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶೌಚ ಗುಂಡಿ ಸ್ವಚ್ಛಗೊಳಿಸುವಾಗ ಒಂದೇ ಕುಟುಂಬದ ಮೂವರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ  ನಡೆದಿದೆ.

ಪ್ರಹ್ಲಾದ್ ಮಂಡಲ್ (60), ಮಗಳು ತನು ವಿಶ್ವಾಸ್ (32) ಮತ್ತು ಅಳಿಯ ಕಾರ್ತಿಕ್ ವಿಶ್ವಾಸ್ (38) ಎಂದು ಗುರುತಿಸಲಾಗಿದೆ.

ಪ್ರಹ್ಲಾದ್ ಮಂಡಲ್ ಇತ್ತೀಚೆಗೆ 8 ಅಡಿ ಆಳದ ಹೊಸ ಶೌಚ ಗುಂಡಿ ನಿರ್ಮಿಸಿದ್ದರು. ಇದರ ಸ್ವಚ್ಛಗೊಳಿಸಲು ಮಗಳು, ಅಳಿಯನೊಂದಿಗೆ ಇಳಿದಿದ್ದರು. ಈ ವೇಳೆ ಪಕ್ಕದ ಹಳೆಯ ಶೌಚ ಗುಂಡಿಯಿಂದ ಅನಿಲ ಸೋರಿಕೆಯಾಗಿದೆ. ಇದರಿಂದ ಆಳದ ಶೌಚ ಗುಂಡಿಯಿಂದ ಹೊರಬರಲಾರದೇ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!