ಹೊಸ ವರ್ಷದಲ್ಲಿ 3 ದಿನಕ್ಕೆ ಮೂರು ನಾಮ ಹಾಕಿದ್ದಾರೆ: ‘ಕೈ’ ವಿರುದ್ಧ ಛಲವಾದಿ ಟೀಕಾಸ್ತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ವರ್ಷದ ಮೂರು ದಿನಗಳಿಗೆ ಮೂರು ನಾಮ ಇಡಲಾಗಿದೆ. ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ್ದು, ಕಾಂಗ್ರೆಸ್ ಸಾಕಷ್ಟು ದೂರ ಸಾಗಬೇಕಿದೆ.

ಆರ್.ಅಶೋಕ್ ನೇತೃತ್ವದಲ್ಲಿ ಮೆಜೆಸ್ಟಿಕ್ ನಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಸ್ ಟಿಕೆಟ್ ದರ ಏರಿಕೆ ಖಂಡಿಸಿ ಮಾತನಾಡಿದರು. ನೀವು ಹೆಣ್ಮಕ್ಕಳಿಗೆ ಫ್ರೀ ಕೊಟ್ಟು, ಗಂಡಸರಿಗೆ ಬರೆ ಕೊಡುತ್ತಿದ್ದೀರಿ. ಹಾಲು, ವಿದ್ಯುತ್ ದರ ಹೆಚ್ಚಿಸಿ ತಲೆ ಬೋಳಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ದಿನ ದೂಡಲು ಹಣವೂ ಬೇಕು. ಆದ್ದರಿಂದ ಬರೆ ಹಾಕುವ ಕೆಲಸ ಮಾಡುತ್ತಿದೆ. ಬಿಜೆಪಿ ಸಾಲ ಮಾಡಿಲ್ಲ. ಕಾಂಗ್ರೆಸ್‌ನವರು ಸುಳ್ಳು ಹೇಳಬೇಡಿ ಎಂದು ಹರಿಹಾಯ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!