ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ರಾಯ್‌ಪುರದ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ರೀಲ್ಸ್ ಮಾಡಿದ ಮೂವರು ನರ್ಸ್‌ಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ.
ನರ್ಸ್‌ಗಳಾದ ಪುಷ್ಪಾ ಸಾಹು, ತೃಪ್ತಿ ದಾಸರ್ ಹಾಗೂ ತೇಜ್ ಕುಮಾರಿ ವಿರುದ್ಧ ದೂರು ಬಂದ ನಂತರ ಮೂವರನ್ನು ವಜಾಗೊಳಿಸಲಾಗಿದೆ.
ಪ್ಲಾಸ್ಟಿಕ್ ಸರ್ಜರಿ ಘಟಕದ ಆಪರೇಷನ್ ಥಿಯೇಟರ್‌ನಲ್ಲಿ ಮೂವರು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಆಪರೇಷನ್ ಥಿಯೇಟರ್ ಒಳಗೆ ಫೋಟೊ ತೆಗೆಯುವುದು, ರೀಲ್ಸ್ ಮಾಡುವುದು ನಿಷೇಧಿಸಲಾಗಿದ್ದರೂ ನಸ್‌ಗಳು ಚಪ್ಪಲಿ, ಶೂ ಧರಿಸಿ ರೀಲ್ಸ್ ಮಾಡಿದ್ದಾರೆ.