ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಟೆಗೆ ದಿನಗಣನೆ ಆರಂಭವಾಗಿದ್ದರೆ ಇನ್ನೊಂದೆಡೆ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿದೆ.
ಈ ನಡುವೆ ಮಂದಿರದ ಅಂತಿಮ ಹಂತದ ಕಾರ್ಯಗಳು ಮತ್ತಷ್ಟು ವೇಗಪಡೆದುಕೊಂಡಿದ್ದು, ಹೆಚ್ಚುವರಿ 500 ಕಾರ್ಮಿಕರನ್ನು ಕರೆಯಿಸಿಕೊಳ್ಳಲಾಗಿದೆ.
ಇದುವರೆಗೆ ಇಲ್ಲಿ 3,500 ಕಾರ್ಮಿಕರು ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಇದೀಗ ಹೆಚ್ಚುವರಿ 500 ಕಾರ್ಮಿಕರು ಜೊತೆಯಾಗುವ ಮೂಲಕ ಇಲ್ಲಿನ ಕಾರ್ಮಿಕರ ಸಂಖ್ಯೆ ಈಗ ನಾಲ್ಕು ಸಾವಿರಕ್ಕೆ ಏರಿಕೆಯಾಗಿದೆ.
ಇಲ್ಲೀಗ ಮೂರು ಪಾಳಿಯಲ್ಲಿ ದಿನದ ಇಪ್ಪತ್ನಾಲ್ಕು ಗಂಟೆ ನಿರಂತರ ಕೆಲಸಗಳು ನಡೆಯುತ್ತಿದೆ.
ಶ್ರೀರಾಮ ಮಂದಿರದ ನೆಲ ಮಹಡಿ ಈಗಾಗಲೇ ಸಿದ್ಧವಾಗಿದ್ದು, ಅಂತಿಮ ಹಂತದ ಒಂದಿಷ್ಟು ಕೆಲಸಗಳಷ್ಟೇ ಬಾಕಿ ಉಳಿದಿದೆ. ಇನ್ನು ನೆಲ ಮಹಡಿಯಲ್ಲಿನ ನೆಲಹಾಸು ಕಾಮಗಾರಿ ಕೂಡಾ ಮುಕ್ತಾಯದ ಹಂತದಲ್ಲಿದೆ. ತಳ ಅಂತಸ್ತಿನ ಕಂಬಗಳಲ್ಲಿ ಶಿಲ್ಪ ಕೆತ್ತನೆ ಕಾರ್ಯವೂ ಜ.15ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.